ಗಿಡ ನೆಟ್ಟು, ಪೌರಕಾರ್ಮಿಕರಿಗೆ ಸಿಹಿ ವಿತರಿಸಿ ಮಹದೇವಪ್ಪ ಹುಟ್ಟು ಹಬ್ಬ ಆಚರಣೆ

Spread the love

ಮೈಸೂರು: ಎಚ್. ಸಿ ಮಹದೇವಪ್ಪ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ಮೈಸೂರು ಜಿಲ್ಲಾ ಮಂತ್ರಿ ಎಚ್ ಸಿ ಮಹದೇವಪ್ಪ ಹುಟ್ಟು ಹಬ್ಬವನ್ನು
ವಿಶೇಷವಾಗಿ ಆಚರಿಸಿದರು.

ಮೈಸೂರಿನ ಬನ್ನಿಮಂಟಪದ ಜೋಡಿ ತೆಂಗಿನ ಮರ ಸಮೀಪ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನೀರು ಹಾಕಿ ನಂತರ ಪೌರಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು

ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಪರಿಶಿಷ್ಟ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಸ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ದಲಿತ ಪ್ಯಾಂಥರ್ ಕಿರಣ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಹಾಗೂ ನಿರ್ದೇಶಕ ಸಿದ್ದರಾಜು, ಎಪಿಎಂಸಿಯ ರಾಮಚಂದ್ರು,ರಾಜೀವ್ ಗಾಂಧಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಲೋಕೇಶ್, ಗಾಂಧಿನಗರದ ಮುಖಂಡರಾದ ಜ್ಯೋತಿ ಲಿಂಗ, ಸುರೇಶ್, ಸೇವಾದಳ ಮೋಹನ್, ನಿತೀಶ್ ಗೌಡ,ನಗರ ಪಾಲಿಕೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಹಾಜರಿದ್ದರು.