ಉಗ್ರರು ಎಲ್ಲೇ ಇರಲಿ ಬೆಳೆಯಲು ಬಿಡಬಾರದು:ಸಿಎಂ ಕಟು ನುಡಿ

Spread the love

ಚಾಮರಾಜನಗರ: ಉಗ್ರರು ಎಲ್ಲೇ ಇರಲಿ ಅವರನ್ನ ಬೆಳೆಯಲಿಕ್ಕೆ ಅವಕಾಶ ಕೊಡಬಾರದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಟುವಾಗಿ ನುಡಿದರು.

ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪಹಲ್ಗಾಮ್ ನಲ್ಲಿ ಅಮಾನಿವಾಯ ಕೃತ್ಯ ನಡೆದು ಹೋಗಿದೆ,ಇದನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿಎಂ,
ಪುಲ್ವಾಮ ಘಟನೆ ನಡೆದಾಗಲೇ ಎಚ್ಚರಿಕೆಯಿಂದ ಇರಬೇಕಿತ್ತು,
ಸ್ವಲ್ಪವೂ ವಿಶ್ರಮಿಸಬಾರದಿತ್ತು,ಈಗಿನ ಘಡನೆಯಲ್ಲಿ ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಇದೆ ಅನ್ನಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಜೀವ ತೆತ್ತಿದ್ದಾರೆ,ಇದು ಮೊತ್ತಮ್ಮೆ ನಡೆಯದಂತೆ ನೋಡಿಕೊಳ್ಳಬೇಕು,
ಯಾವುದೇ ಜಾತಿ ಧರ್ಮಕ್ಕೆ ಸೇರಿದವರಾಗಲಿ ಅವರನ್ನ ಮಟ್ಟ ಹಾಕಬೇಕು ಎಂದು ಸಿಎಂ ಆಗ್ರಹಿಸಿದರು.

ಮೃತರ ಕುಟುಂಬಗಳ ಜೊತೆ ನಾವೀದ್ದೇವೆ
10 ಲಕ್ಷ ಪರಿಹಾರ ಕೊಟ್ಟಿದ್ದೇವೆ,
ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೇಕೆದಾಟು ಯೋಜನೆ ಮಾಡಲು ನಾವು ತಾಯರಿದ್ದೇವೆ,ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಹಲವು ಭಾರಿ ಮಾತನಾಡಿದ್ದೇನೆ ಎಂದು ಹೇಳಿದರು.