ಮೈಸೂರು: ಮಲೆಮಹದೇಶ್ವರ ವನ್ಯ ಅರಣ್ಯ ಧಾಮದಲ್ಲಿ ಹೆಣ್ಣು ಹುಲಿಯನ್ನು ಹತ್ಯೆ ಮಾಡಲಾಗಿದ್ದು,ಇದು ತೀರ್ವ ಬೇಸರ ತರುವ ಸಂಗತಿಯಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಒಂದು ಹೆಣ್ಣು ಹುಲಿ ಮತ್ತು ನಾಲ್ಕು ಹುಲಿ ಮರಿಗಳನ್ನು ವಿಷಪ್ರಾಶನ ಮಾಡಿ ಹತ್ಯೆ ಮಾಡಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಹೆಣ್ಣು ಹುಲಿ ಯೊಂದನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಇದು ಅಕ್ಷಮ್ಯ ಎಂದು ಹೇಳಿದ್ದಾರೆ.
ಹುಲಿಗಳ ಹತ್ಯೆ ಪ್ರಕರಣದಲ್ಲಿ ಈಗಿರುವ ಕಾನೂನನ್ನು ಸರ್ಕಾರ ತಿದ್ದುಪಡಿ ಮಾಡಿ ಹೊಸ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಈರೀತಿ ಕಾನೂನು ಜಾರಿಗೆ ತರುವ ಮೂಲಕ ಹುಲಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡುವುದನ್ನು ನಿಲ್ಲಿಸ ಬಹುದಾಗಿದೆ ಇಲ್ಲದಿದ್ದರೆ ಹುಲಿಗಳ ಸಂತತಿ ಮುಂದಿನ ಪೀಳಿಗೆಗೆ ನಾಶವಾಗುವ ಸಂಭವವಿದೆ ಎಂದು ತೇಜಸ್ವಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅರಣ್ಯಾಧಿಕಾರಿಗಳು ಹುಲಿಯನ್ನು ಹತ್ಯೆ ಮಾಡಿರುವವರನ್ನು ಬಂಧಿಸಬೇಕು ರಾಜ್ಯ ಸರ್ಕಾರ ಇವರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.