ನಾಳೆ ಮಡಿವಾಳ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

Spread the love

ಮೈಸೂರು,ಮಾ.7: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಶ್ರೀ ವೀರ ಮಡಿವಾಳ ಮಾಚಿ ದೇವರ ಜಯಂತೋತ್ಸವ ಅಂಗವಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.

ಮಡಿವಾಳ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀರಾಂಪುರ 2ನೇ ಹಂತದಲ್ಲಿ ನಾಳೆ(ಮಾರ್ಚ್ 8) ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಸಂತೋಷ್
ಕಿರಾಳು ತಿಳಿದಿದ್ದಾರೆ.

ಕಾರ್ಯಕ್ರಮಕ್ಕೆ ಮುನ್ನ ಅಂತರರಾಷ್ಟ್ರೀಯ ಜನಪದ ಗಾಯಕರಾದ ಅಮ್ಮ ರಾಮಚಂದ್ರ ರವರಿಂದ ಗಾಯನ ಕಾರ್ಯಕ್ರಮದ ಆಯೋಜಿಸಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗ ಮಡಿವಾಳ ಗುರು ಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ವಹಿಸುವರು.

ವಿಧಾನ ಪರಿಷತ್‌ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮಡಿವಾಳ ಸಮಾಜದ ಮುಖಂಡರಾದ
ಎ ಎಸ್ ರವಿಕುಮಾರ್ ಭಾಗವಹಿಸುವರು.

ಮುಖ್ಯ ಅತಿಥಿಗಳಾಗಿ ಆಧ್ಯಾತ್ಮಿಕ ಚಿಂತಕರು
ವಿಶ್ರಾಂತ ಮುಖ್ಯ ಅಭಿಯಂತರರು ಶಂಕರ್ ದೇವನೂರು, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ ಎಸ್ ಶಿವರಾಜಪ್ಪ, ಕಿರುತರೆ ನಟಿ ರೇಣು ಶಿಕಾರಿ ಹಾಗೂ ಮಡಿವಾಳ ಸಮಾಜದ ಮುಖಂಡರಾದ ಸಿ.ಎಸ್ ಮಹೇಶ್, ವೆಂಕಟೇಶ್ ಗುಂಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸಂತೋಷ್ ಕಿರಾಳು ತಿಳಿಸಿದ್ದಾರೆ.