ಮಡಿವಾಳ ಮಾಚಿದೇವರು 12ನೆ ಶತಮಾನದಲ್ಲಿ ಉದಯಿಸಿದ ಶರಣ ಕಿರಣ-ನಜರ್ ಬಾದ್ ನಟರಾಜ್

ಮೈಸೂರು: ಮಡಿವಾಳ ಮಾಚಿದೇವರು 12ನೆಯ ಶತಮಾನದಲ್ಲಿ ಉದಯಿಸಿದ ಶರಣ ಕಿರಣ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ನುಡಿದರು.

ಮೈಸೂರಿನ ನಜರಬಾದ್ ನಲ್ಲಿ ಚಾಮುಂಡೇಶ್ವರಿ ಬಳಗ ಹಾಗೂ ಅಹಿಂದ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವೀರ ಮಡಿವಾಳ ಮಾಚಿದೇವರ ಜಯಂತಿಯ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಾಚಿ ದೇವರು ಮಾಡುತ್ತಿದ್ದ ಮಡಿಕಾಯಕ ಅತಿ ಮಹತ್ವದ್ದು, ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು ಎಂದು ಹೇಳಿದರು.

ನಮ್ಮ ಸಮಾಜಕ್ಕಾಗಿ ಎಂದು ಬದುಕಿದವರು ಮಾಚಿದೇವರು.ಸೋಮಾರಿತನ ಬಿಟ್ಟು ನಿತ್ಯ ಕಾಯಕದಲ್ಲಿ ತೊಡಗುವಂತೆ ಸಂದೇಶ ನೀಡಿದ ಅವರು ನಮ್ಮೆಲ್ಲರ ಹೆಮ್ಮೆ ಎಂದು ನಜರಬಾದ್ ನಟರಾಜ್ ಬಣ್ಣಿಸಿದರು.

ಕಾಂಗ್ರೆಸ್ ಮುಖಂಡ ಬಸವರಾಜ್ ಪೂಜಾರಿ (ದೇವದುರ್ಗಾ) ಅವರು ಮಾತನಾಡಿ, ಸರ್ಕಾರದಿಂದ ಮಡಿವಾಳ ಮಾಚಿದೇವರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯ,ಶಾಲಾ ಕಾಲೇಜುಗಳಲ್ಲಿ ಮಡಿವಾಳ ಮಾಚಿದೇವರ ಕುರಿತು ಪಾಠ ಪ್ರವಚನ ಮೂಲಕ ತಿಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗದ ಅಧ್ಯಕ್ಷ ಎನ್ ಆರ್ ನಾಗೇಶ್, ಉಪಾಧ್ಯಕ್ಷ ರಮೇಶ್ ರಾಮಪ್ಪ, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್,ಸೇವಾದಳ ಮೋಹನ್, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮರಟಿ ಕ್ಯಾತನಹಳ್ಳಿ, ಕೃಷ್ಣಪ್ಪ ಘಂಟೆಯ, ಅಸಂಘಟಿತ ಕಾರ್ಮಿಕರ ವಿಭಾಗದ ಫ್ರಾಸಿಸ್, ಸುನಿಲ್ ನಾರಾಯಣ್, ಎಸ್ ಟಿ ವಿಭಾಗದ ಜಿಲ್ಲಾಧ್ಯಕ್ಷ ನಾಗವಾಲ ಮಹೇಶ್, ಪ್ರಕಾಶ್, ಡೈರಿ ವೆಂಕಟೇಶ್, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷರು ಸವಿತಾ ಘಾಟ್ಕೆ,ಸುರೇಶ್ ಎಸ್, ಮಹಾನ್ ಶ್ರೇಯಸ್ ಉಪಸ್ಥಿತರಿದ್ದರು.