ಮಧ್ಯ ಪ್ರದೇಶ: ಮಧ್ಯಪ್ರದೇಶ ರಾಜ್ಯದ ಸಿಹೋರ್ ಜಿಲ್ಲೆಯ ಅಷ್ಟ ಉಪ ವಿಭಾಗದ ಮಧ್ಯಪ್ರದೇಶ ಸರ್ಕಾರಿ ಪ್ರವೀಕ್ಷಣ ಮಂದಿರದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಜಾನಪದ ಡಾ ಎಸ್ ಬಾಲಾಜಿ ಅವರನ್ನು ಸ್ವಾಗತಿಸಲಾಯಿತು.
ಅಷ್ಟ ಮುನ್ಸಿಪಾಲ್ ನಗರಸಭೆ ಸದಸ್ಯ ರವಿ ಶರ್ಮಾ, ಬಿಜೆಪಿಯ ಜಿಲ್ಲಾಧ್ಯಕ್ಷ ಲಲಿತ್ ನಗೋರಿ,ಅಷ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಸೋನು ಗುನವಾಣ, ಮಧ್ಯಪ್ರದೇಶ ರಾಜ್ಯ ಯುವ ಒಕ್ಕೂಟದ ಅಧ್ಯಕ್ಷ ರಾಕೇಶ್ ಶರ್ಮ,ಮಧ್ಯ ಪ್ರದೇಶ್ ಆರೋಗ್ಯ ಇಲಾಖೆಯ ತರುಣ್ ರಾಥೋಡ್, ಸುರೇಶ ಪಾಂಚಾಯಲ್ ಅವರುಗಳು ಸ್ವಾಗತಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಲಲಿತ್ ನಾಗರಿ ಮಾತನಾಡಿ,ಸಿಗೋರ್ ಜಿಲ್ಲೆ ಸಾಂಸ್ಕೃತಿಕ ಜಿಲ್ಲೆಯಾಗಿದ್ದು ಇಲ್ಲಿಗೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಾದ ಡಾ.ಎಸ್. ಬಾಲಾಜಿ ಅವರು ಆಗಮಿಸಿ ಸಾಂಸ್ಕೃತಿಕ ಮಿಲನಕ್ಕೆ ಕಾರಣರಾಗಿದ್ದಾರೆ, ಮುಂದಿನ ದಿನಗಳಲ್ಲಿ ವಿಶೇಷವಾಗಿ ಅಷ್ಟಾದಲ್ಲಿ ಜಾನಪದ ಉತ್ಸವಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ನಗರಸಭಾ ಸದಸ್ಯ ರವಿ ಶರ್ಮ ಅವರು ಮಾತನಾಡಿ ಸರೋವರಗಳ ನಗರಕ್ಕೆ ಆಗಮಿಸಿದ ನಾಡಿನ ಸಾಂಸ್ಕೃತಿಕ ರಾಯಭಾರಿಗಳಾದ ಡಾ ಎಸ್ ಬಾಲಾಜಿ ಅವರ ಬಗ್ಗೆ ನಮಗೆ ಬಹಳ ಗೌರವವಿದೆ ಎಂದು ತಿಳಿಸಿದರು.