ಮೈಸೂರು: ಹುಚ್ಚುನಾಯಿ ಕಡಿತದಿಂದ ಬಳಲುತ್ತಿದ್ದ ಮೇಟಗಳ್ಳಿ ಮಹಾಲಿಂಗೇಶ್ವರ ದೇವಾಲಯದ ಬಸವ ಮೃತಪಟ್ಟಿದೆ.
ಚಿಕಿತ್ಸೆ ಫಲಕಾರಿಯಾಗದೆ ಬಸವ ಇಂದು ಮೃತಪಟ್ಟಿದೆ.
ಕೆಲವು ದಿನಗಳ ಹಿಂದೆ ಬಸವನಿಗೆ ಹುಚ್ಚುನಾಯಿ ಕಚ್ಚಿತ್ತು, ನಂತರ ಬಸವ ನಾಯಿಯಂತೆ ಶಬ್ಧಮಾಡುತ್ತಾ ಕಚ್ಚಲು ಹೋಗುತ್ತಾ ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿತ್ತು.
ಸ್ಥಳೀಯರು ಬಸವನನ್ನು ಕಟ್ಟಿಹಾಕಿ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು, ಆದರೆ ಚಿಕಿತ್ಸೆ ಫಲಿಸದೆ ಬಸವ ಮೃತಪಟ್ಟಿದೆ.
ಮಹಾಲಿಂಗೇಶ್ವರ ದೇವಾಲಯದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಇಂದು ಸಂಜೆ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಯಿತು.