ಮೈಸೂರು: ಎಲ್ಲಾ ಕಡೆ ಆಯಿತು ವಕ್ಫ್ ಮಂಡಳಿ ಕಣ್ಣು ಈಗ ಮೈಸೂರಿನ ಹೃದಯ ಭಾಗ ವಿನೋಬಾ ರಸ್ತೆಯ ಸುಮಾರು 109 ವರ್ಷಗಳ ಹಳೆಯದಾದ ಎಂ ಕೆ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ.
ಈ ಹಾಸ್ಟೆಲ್ ಕಟ್ಟಡ ತಮಗೆ ಸೇರಿದ್ದು ಎಂದು ನೋಟಿಸ್ ಹಾಕಿರುವುದನ್ನ ಕರ್ನಾಟಕ ಸೇನಾ ಪಡೆ ತೀವ್ರವಾಗಿ ಖಂಡಿಸಿದೆ ಜತೆಗೆ ಪ್ರಧಾನಿ ಅವರಿಗೆ ಮನವಿ ರವಾನಿಸಿದೆ.
ಎಂಕೆ ಹಾಸ್ಟೆಲ್ ಕಟ್ಟಡದ ಮುಂದೆ ಆಂಗ್ಲ ಭಾಷೆಯ ನೋಟಿಸ್ ಅಂಟಿಸಿರುವ ವಕ್ಫ್ ಮಂಡಳಿ ಮೇ 9ರ ಒಳಗಾಗಿ ಉತ್ತರ ನೀಡುವಂತೆ ತಿಳಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕರ್ನಾಟಕ ಸೇನಾ ಪಡೆ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಮೂಲತಃ ಈ ಕಟ್ಟಡವನ್ನು 1916ರ ಮಾರ್ಚ್ 11 ರಂದು ಉದ್ಘಾಟನೆ ಮಾಡಿ ಶ್ರೀ ಸಂಪಂಗಿ ರಾಮ ಪ್ರಸನ್ನ ಧರ್ಮ ಸ್ಟೂಡೆಂಟ್ಸ್ ಹೋಂ ಎಂದು ಹಳೆ ಗನ್ನಡದಲ್ಲಿ ಬರೆಯಲಾಗಿದೆ.
ಈ ಎಂ ಕೆ ಹಾಸ್ಟೆಲ್ ಪಕ್ಕ ಬಹಳ ವರ್ಷಗಳ ಹಿಂದೆ ವೀರಶೈವ ಲಿಂಗಾಯಿತರ 2-3 ಗದ್ದುಗೆಗಳು ಇದ್ದು, ಮುಸ್ಲಿಂ ಒಬ್ಬ ಈ ಗದ್ದುಗೆಯ ಜಾಗಕ್ಕೆ ಬಂದು ಅನಧಿಕೃತವಾಗಿ ಸೇರಿಕೊಂಡು ಆ ಗದ್ದುಗೆಯನ್ನು ದರ್ಗಾ ರೀತಿ ಮಾರ್ಪಾಡು ಮಾಡಿ ಮರಣಹೊಂದಿದ್ದಾರೆ. ನಂತರ ಇನ್ನೊಬ್ಬ ಮುಸಲ್ಮಾನ ಬಂದು ಗದ್ದುಗೆಗಳಿದ್ದ ಜಾಗವನ್ನು ತನ್ನದೆಂದು ಹೇಳಿಕೊಂಡು ಈ ಗದ್ದುಗೆ ಇದ್ದ ಚಿಕ್ಕ ಜಾಗವನ್ನು ಮಾರಾಟ ಮಾಡಲು ಯತ್ನಿಸಿ, ಮೂಲ ದಾಖಲೆ ಪುರಾವೆ ಗಳು ಇಲ್ಲದ ಕಾರಣ ಮಾರಲಾಗದೆ, ಈಗ ವಕ್ಫ್ ಮಂಡಳಿ ಆಸ್ತಿ ಎಂದು ಸ್ವಯಂಘೋಷಿಸಿಕೊಂಡು ಎಂ ಕೆ ಹಾಸ್ಟೆಲ್ ಗೆ ನೋಟಿಸ್ ನೀಡಿರುವುದು ಅತ್ಯಂತ ಹೀನಾಯ ಕೃತ್ಯ ವಾಗಿದೆ ಎಂದು ಈ ವೇಳೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಮಹಾನಗರ ಪಾಲಿಕೆ ಕೂಡಲೇ ಇದರ ತನಿಖೆ ನಡೆಸಿ ಮೂಲ ದಾಖಲಾತಿಗಳನ್ನು ಪರೀಕ್ಷಿಸಿ, ಈ ಅನಧಿಕೃತ ಜಾಗವನ್ನು ವಶಕ್ಕೆ ಪಡಿಸಿಕೊಂಡು ಸರ್ಕಾರಿ ಕಚೇರಿ ಅಥವಾ ಲೈಬ್ರರಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ಯಾರದ್ದೇ ಭೂಮಿ, ಕಟ್ಟಡವನ್ನು ನಮ್ಮದು ಅಂತ ಹಕ್ಕು ಸಾಧಿಸೋ ಅಧಿಕಾರ ಈ ದೇಶದ ವಕ್ಫ್ ಬೋರ್ಡ್ ಗಳಿಗೆ ಇವೆ ಎನ್ನುವಂತ ಅಧಿಕಾರವನ್ನು 1995ರಲ್ಲಿ ಕೊಡಲಾಗಿತ್ತು.
ಬಳಿಕ 2013ರಲ್ಲಿದ್ದ ಯುಪಿಎ ಸರ್ಕಾರವು ಕೂಡ ಇನ್ನಷ್ಟು ಹೆಚ್ಚಿನ ಅಧಿಕಾರ ನೀಡಿತು. ಈ ಅಧಿಕಾರದಿಂದಾಗಿ 2006ರಲ್ಲಿ ನಮ್ಮ ದೇಶಾದ್ಯಂತ ಇದ್ದ ವಕ್ಫ್ ಆಸ್ತಿ 1,20,000 ಎಕರೆ ಇದ್ದದ್ದು ಈಗ 9,40,000 ಎಕರೆಯಾಗಿದೆ ಎಂದು ಅಂದಾಜಿಸಲಾಗಿದೆ.
ಒಂದೇ ದೇಶ ಒಂದೇ ತೆರಿಗೆಯಂತೆ, ಒಂದೇ ದೇಶ ಒಂದೇ ಕಾನೂನು ಎಲ್ಲರಿಗೂ ಜಾರಿ ಮಾಡಬೇಕು. ಹಿಂದೂ ದೇವಸ್ಥಾನ, ಮಠಗಳಿಗೊಂದು ಕಾನೂನು ವಕ್ಫ್ ಮಂಡಳಿಗೊಂದು ಕಾನೂನು ಇರಬಾರದು ಎಂದು ಹೇಳಿದರು.
ಎಲ್ಲರೂ ಎಲ್ಲವೂ ಭಾರತದ ಸಂವಿಧಾನದಲ್ಲಿ, ಕಾನೂನುಡಿಯಲ್ಲಿ ಬರಬೇಕು.ದೇಶದ ಕಾನೂನು ಮತ್ತು ನ್ಯಾಯಾಲಯಗಳನ್ನು ಎಲ್ಲರೂ ಗೌರವಿಸಬೇಕು ಎಂದು ಒತ್ತಾಯಿಸಿದರು.
ತಕ್ಷಣವೇ ಎಮ್ ಕೆ ಹಾಸ್ಟೆಲ್ ಗೆ ನೀಡಿರುವ ನೋಟಿಸ್ ಅನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹಾಗೂ ಪ್ರಧಾನಿಯವರು ದೇಶಾದ್ಯಂತ ಈ ವಕ್ಫ್ ಬೋರ್ಡನ್ನು ನಿಷೇಧಿಸಬೇಕೆಂದು ಕರ್ನಾಟಕ ಸೇನಾ ಪಡೆ ವತಿಯಿಂದ ಒತ್ತಾಯಿಸಿ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಿದರು.
ಈ ನಿಯೋಗದ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದರು. ಪ್ರಭುಶಂಕರ, ನೇಹಾ, ವರಕೂಡು ಕೃಷ್ಣೇಗೌಡ, ಹನುಮಂತಯ್ಯ, ಭಾಗ್ಯಮ್ಮ, ನಾರಾಯಣಗೌಡ , ಬಸವರಾಜು , ದರ್ಶನ್ ಗೌಡ, ರವೀಶ್,ಶಿವಕುಮಾರ್ ಸೇರಿದಂತೆ ಹಲವು ಮುಖಮಡರು ಹಾಜರಿದ್ದರು.
ಡಿಸಿ ಕಚೇರಿಯಿಂದ ಎಂ ಕೆ ಹಾಸ್ಟೆಲ್ ಬಳಿ ತೆರಳಿದ ನಿಯೋಗ ಬೇಕೇ ಬೇಕು ನ್ಯಾಯ ಬೇಕು,ಈ ಕಟ್ಟಡವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನೆ ಸಹಾ ನಡೆಸಿದರು.

ಈ ವೇಳೆ ಬಿಜೆಪಿಯ ಎಲ್.ನಾಗೇಂದ್ರ ಮತ್ತಿತರ ನೂರಾರು ಮುಖಂಡರು ಸಾಥ್ ನೀಡಿದರು.