ಎಂ.ಜೆ ಸೂರ್ಯನಾರಾಯಣ್ ಗೆ ಶುಭ ಹಾರೈಕೆ

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ನೌಕರ ಎಂ.ಜೆ ಸೂರ್ಯನಾರಾಯಣ್ ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಮೂರ್ತಿ ಅವರು ಸನ್ಮಾನಿಸಿ ಶುಭ ಹಾರೈಸಿದರು.

ಈ ವೇಳೆ ಆರ್. ಮೂರ್ತಿ ಅವರು ಮಾತನಾಡಿ, ಮೈಸೂರು ದಸರಾ ವಸ್ತುಪ್ರದರ್ಶನ ದೊಡ್ಡಕೆರೆ ಮೈದಾನದಲ್ಲಿ ನಿರಂತರವಾಗಿ ನಡೆಯಬೇಕೆಂದು ಕರ್ನಾಟಕ ಸರ್ಕಾರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ರಚಿಸಿತು ಅದಕ್ಕೆ ಪ್ರಪ್ರಥಮ ಅಧ್ಯಕ್ಷನಾಗಿ ನಾನು ಅಧಿಕಾರ ವಹಿಸಿಕೊಂಡು ಕಾರ್ಯಚಟುವಟಿಕೆ ಪ್ರಾರಂಭಿಸಿದೆ ಎಂದು ಸ್ಮರಿಸಿದರು.

40ವರ್ಷಗಳಿಂದ ಪ್ರಾಧಿಕಾರದಲ್ಲಿ ದುಡಿದು ನಿವೃತ್ತಿಯಾಗುತ್ತಿರುವ ಪ್ರಾಧಿಕಾರದ ಕೊನೆಯ ಸರ್ಕಾರಿ ನೌಕರ ಎಂ.ಜೆ ಸೂರ್ಯನಾರಾಯಣ್ ಅಧಿಕಾರಿಗಳೊಂದಿಗೆ ಆಪ್ತ ಸಹಾಯಕರಾಗಿ ಉತ್ತಮ ಕೆಲಸ ಮಾಡಿದ್ದಾರೆ, ಅವರ ನಿವೃತ್ತಿ ಜೀವನದ ದಿನಗಳು ಸಂತೋಷದಾಯಕ ವಾಗಿರಲಿ ಎಂದು ಶುಭ ಹಾರೈಸಿದರು

ಈ ಸಂಧರ್ಭದಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಗಿರೀಶ್, ಸಿಎಸ್. ರಘು, ಕೆ‌ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ನಿರೂಪಕ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ರಂಗಸ್ವಾಮಿ ಪಾಪು, ಗುರುರಾಜ್ ಹಾಜರಿದ್ದರು.