ಬೆಳಗಾವಿ,ಜು.1: ಪ್ರೇಮಿಗಳಿಬ್ಬರು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕು ಚಿಕ್ಕನಂದಿ ಗ್ರಾಮದ ಬಳಿ ನಡೆದಿದೆ.
ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್(28), ರಂಜೀತಾ ಚೋಬರಿ(26) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಮುನವಳ್ಳಿ ಪಟ್ಟಣದ ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಹದಿನೈದು ದಿನದ ಹಿಂದೆ ರಂಜೀತಾಳಿಗೆ ಆಕೆಗೆ ವಿರೋಧವಾಗಿ ಮನೆಯವರಯ ನಿಶ್ಚಿತಾರ್ಥ ಮಾಡಿದ್ದರು.
ಮನೆಯಲ್ಲಿ ಪ್ರಿಯಕರನೊಂದಿಗೆ ಮದುವೆಗೆ ಒಪ್ಪದೇ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಿಯ ಮಾಡಿದ ಹಿನ್ನೆಲೆಯಲ್ಲಿ ಪ್ರಿಯತಮನ ಜತೆ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು. ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ