ಮೈಸೂರು: ನನ್ನ ಪ್ರಿಯತಮೆ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತೀಯಾ ಎಂದು ಧಮ್ಕಿ ಹಾಕಿ ಯುವಕನ ಮೇಲೆ ಪ್ರಿಯತಮ ಹಲ್ಲೆ ನಡೆಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೇಣುಗೋಪಾಲ್ (21) ಗಾಯಗೊಂಡ ಯುವಕ.ಪ್ರಿಯತಮ ರಾಜು ಹಾಗೂ ಆತನ ಸ್ನೇಹಿತನ ವಿರುದ್ಧ ವೇಣುಗೋಪಾಲ್ ದೂರು ದಾಖಲಿಸಿದ್ದಾರೆ.
ಜನತಾ ನಗರ ನಿವಾಸಿ ವೇಣುಗೋಪಾಲ್ ಅವರು ಪಕ್ಕದ ರಸ್ತೆ ಯುವತಿ ಜೊತೆ ಪರಿಚಯವಿದ್ದ ಕಾರಣ ಆಗಾಗ ಮೊಬೈಲ್ ಮೂಲಕ ಮಾತನಾಡುವುದು ಒಮ್ಮಮ್ಮೆ ಚಾಟ್ ಮಾಡುವುದು ಮಾಡುತ್ತಿದ್ದ.
ಇದನ್ನ ಸಹಿಸದ ಯುವತಿಯ ಲವರ್ ರಾಜು ಹಲ್ಲೆ ನಡೆಸಿದ್ದಾನೆ.ನಿನ್ನ ಜತೆ ಮಾತನಾಡಬೇಕು ಬಾ ಎಂದು ವೇಣುಗೋಪಾಲನನ್ನು ಕರೆಸಿಕೊಂಡ ರಾಜು ಹಾಗೂ ಸ್ನೇಹಿತ ಬೈಕ್ ನಲ್ಲಿ ವಿಜಯನಗರ ಹೈಟೆನ್ಷನ್ ವೈರ್ ಬಳಿ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಅವಳು ನನ್ನ ಲವರ್ ಅಂತ ಗೊತ್ತಿದ್ರೂ ಮಾತಾಡ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್ ನ ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ.
ಇವರಿಬ್ಬರಿಂದ ತಪ್ಪಿಸಿಕೊಂಡ ವೇಣುಗೋಪಾಲ್, ಪೊಲೀಸರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ವೇಣುಗೋಪಾಲ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ರಾಜು ಹಾಗೂ ಸ್ನೇಹಿತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.