ಲಾರಿ-ಗೂಡ್ಸ್ ಆಟೋ ಡಿಕ್ಕಿ:ಇಬ್ಬರ ದುರ್ಮ*ರಣ

Spread the love

ಚಾಮರಾಜನಗರ: ಕಬ್ಬು ಸಾಗಿಸುತ್ತಿದ್ದ ಲಾರಿ ಹಾಗೂ ಆಟೋ ನಡುವೆ‌ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲದ ಯಳಂದೂರು ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.

ಸುಮಂತ್ (22) ನಿತಿನ್ ಕುಮಾರ್ (16) ಮೃತ ದುರ್ದೈವಿಗಳು.

ಕಬ್ಬು ಸಾಗಿಸುತ್ತಿದ್ದ ಲಾರಿ ಹಾಗೂ ಟೊಮೆಟೊ ತುಂಬಿಕೊಂಡು ಹೋಗುತ್ತಿದ್ದ ಆಟೋ ನಡುವೆ ಡಿಕ್ಕಿಯಾಗಿದೆ.

ಎಳೆಪಿಳ್ಳಾರಿ ಸಮೀಪದ ಜಮೀನಿನಿಂದ ಕಬ್ಬು ತುಂಬಿಸಿಕೊಂಡ ಲಾರಿ ಕಾರ್ಖಾನೆಗೆ ತೆರಳಲು ರಸ್ತೆಯ ಬಳಿ ನಿಂತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಗೂಡ್ಸ್ ಅಟೋ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ‌ ಟೊಮೆಟೊ‌ ಬಾಕ್ಸ್ಗಳು ನೆಲಕ್ಕೆ ಉರುಳಿ ಟೊಮೆಟೊ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.

ಈ ಸಂಬಂಧ ಯಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.