ಉಡುಪಿ: ಉಡುಪಿಯ ಶಂಕರಪುರದ ಸೈಂಟ್ ಜಾನ್ ಪ್ರೌಢಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಷಮುಕ್ತ ಕೃಷಿ ಹಾಗೂ ಪರಿಸರ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಒಂದು ದಿನದ ವಿಷಮುಕ್ತ ಕೃಷಿ ಹಾಗೂ ಪರಿಸರ ವೀಕ್ಷಣೆ ಕಾರ್ಯಕ್ರಮವು ಜಿಲ್ಲಾ ರಾಜ್ಯೋತ್ಸವ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಜೋಸೆಫ್ ಲೋಬೋ ಶಂಕರಪುರ ಅವರ ತೋಟದಲ್ಲಿ ನಡೆಯಿತು.

ಲೋಬೋ ಅವರ ತಾರಸಿ ಕೃಷಿ ಹಾಗೂ ಜೇನು ಸಾಕಾಣಿಕೆಯ ವಿಷಯವನ್ನು ವಿದ್ಯಾರ್ಥಿಗಳು ಅರಿತುಕೊಂಡರು.

ಈ ವೇಳೆ 274000 ಮೌಲ್ಯದ ಮಿಯಾ ಝಕಿ ಮಾವಿನ ಹಣ್ಣನ್ನು ಕಂಡು ವಿದ್ಯಾರ್ಥಿಗಳು ಬೆರಗಾದರು.
ಸಣ್ಣ ಜಾಗದಲ್ಲೂ ಮನೆಗೆ ಬೇಕಾದಷ್ಟು ಕೃಷಿಯನ್ನು ಮಾಡಿ ವಿಶಮುಕ್ತ ಅನ್ನದ ಬಟ್ಟಲು ನಮ್ಮದಾಗಿಸಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಅಧ್ಯಾಪಕರು ವಿದ್ಯಾರ್ಥಿಗಳು ಸೇರಿ 50 ಜನರಿಗೆ ಕೃಷಿ ಹಾಗೂ ಪರಿಸರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.