ಬೆಂಗಳೂರು: ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯೊಬ್ಬರನ್ನು ಲಿವ್-ಇನ್ ಸಂಗಾತಿ ಬೆಂಕಿ ಹಚ್ಚಿ ಕೊಂದಿರುವ ಹೇಯ ಘಟನೆ ನಡೆದಿದೆ.
ವನಜಾಕ್ಷಿ ಎಂಬವರು ಮೃತಪಟ್ಟಿದ್ದು ಕ್ಯಾಬ್ ಚಾಲಕ ವಿಠಲ್ ಬೆಂಕಿ ಹಚ್ಚಿದ್ದಾನೆ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಿವ್-ಇನ್ ಸಂಗಾತಿ ಬೆಂಕಿ ಹಚ್ಚಿದ್ದು ನಂತರ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಆಸ್ಪತ್ರೆಗೆ ದಾಖಲಾದ ನಂತರ ವನಜಾಕ್ಷಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದು ಘಟನೆ ನಡೆದ 24 ಗಂಟೆಗಳ ಒಳಗೆ ಕ್ಯಾಬ್ ಚಾಲಕ ವಿಠಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆತನಿಗೂ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ವನಜಾಕ್ಷಿ ಮತ್ತು ವಿಠಲ್ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.