ಮೈಸೂರು: ಲಯನ್ಸ್ ಕ್ಲಬ್ ಅಫ್ ಮೈಸೂರು ಅಂಬಾಸಿಡರ್ಸ್ ಮತ್ತು ಲಯನ್ಸ್ ಕ್ಲಬ್ ಪಿರಿಯಾಪಟ್ಟಣ ವತಿಯಿಂದ ಲಯನ್ಸ್ ಟ್ವಿನಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ಮತ್ತು ಲಯನ್ಸ್ ಕ್ಲಬ್ ಆಫ್ ಪಿರಿಯಾಪಟ್ಟಣ ಸಂಸ್ಥೆಗಳು ಟ್ವಿನಿಂಗ್ ಕಾರ್ಯಕ್ರಮದ ಅಂಗವಾಗಿ ವಿಶೇಷ ಸಭೆಯನ್ನು ನಡೆಸಿದವು.
ಕ್ಲಬ್‌ಗಳ ನಡುವಿನ ಸ್ನೇಹ, ಸೇವಾ ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬಲಪಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಎರಡು ಕ್ಲಬ್‌ಗಳ ಸದಸ್ಯರು ಪರಸ್ಪರ ಅನುಭವ ಹಂಚಿಕೊಂಡು, ಮುಂದಿನ ಸೇವಾ ಯೋಜನೆಗಳ ಬಗ್ಗೆ ಚರ್ಚಿಸಿದರು.
ಈ ವೇಳೆ ಅಂಬಾಸಿಡರ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಡಾ.ಆರ್ ಡಿ ಕುಮಾರ್ ಅವರು ಮಾತನಾಡಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ವೃದ್ಧಿಸುವ ಅಗತ್ಯವಿದೆ ಎಂದು ಹೇಳಿದರು.
ಪಿರಿಯಾಪಟ್ಟಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಜೆ.ಗಿರೀಶ್ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಿದರೆ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಹೊಸ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದು ಎಂದು ಸಲಹೆ ನೀಡಿದರು.
ಎರಡೂ ಸಂಸ್ಥೆಗಳವರು ಪರಸ್ಪರ ಬ್ಯಾನರ್ ಮತ್ತು ಲಯನ್ಸ ಟ್ವಿನಿಂಗ್ ಪ್ರಮಾಣ ಪತ್ರಗಳನ್ನು ಬದಲಾವಣೆಯನ್ನು ಮಾಡಿಕೊಂಡರು.
ಲಯನ್ಸ್ ಜಿಲ್ಲೆ 317 ಜಿ ಯ ಸಂಪುಟ ಕಾರ್ಯದರ್ಶಿ ಲಯನ್ ಟಿ.ಹೆಚ್ ವೆಂಕಟೇಶ್ ಅವರು ಮೈಸೂರಿನ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂಜನಾ ಎಂಬ ವಿದ್ಯಾರ್ಥಿಗೆ ವಾರ್ಷಿಕ ಶುಲ್ಕ 25000ಗಳನ್ನು ನೀಡಿದರು.
ಪ್ರಾಂತೀಯ ಅಧ್ಯಕ್ಷ ಲಯನ್ ಹೆಚ್.ಸಿ.ಕಾಂತರಾಜು, ಜಿಲ್ಲಾ ಅಧ್ಯಕ್ಷರುಗಳಾದ ಮಾಕಾಳ ಶಿವಕುಮಾರ್,ವಿ.ಶ್ರೀಧರ್ ಹಾಗೂ ಉಭಯ ಸಂಸ್ಥೆಗಳ ಕಾರ್ಯದರ್ಶಿಗಳಾದ ಕೆ.ಟಿ.ವಿಷ್ಣು ಮತ್ತು ವಿಜಯಕುಮಾರ್, ಖಜಾಂಚಿ ಡಾ. ಜಿ ಕಿಶೋರ್ ಮತ್ತು ಆನಂದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಸಬ್ ಇನ್ ಸ್ಪೆಕ್ಟರ್ ಎಂ.ಡಿ.ಅಪ್ಪಾಜಿ ಅವರನ್ನು ಅವರ ಸೇವಾ ಕಾರ್ಯಕ್ಷಮತೆಯ ಅಂಗವಾಗಿ ರಾಯಭಾರಿ ಆರಕ್ಷಕ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.

