ಸೇವಾ ಕಾರ್ಯಕ್ರಮದಿಂದ ಅರ್ಥಿಕ ಸದೃಢ ಸಾಧ್ಯ:ಹೆಚ್.ಸಿ.ಕಾಂತರಾಜು

Spread the love

ಮೈಸೂರು: ಲಯನ್ಸ್ ಸಂಸ್ಥೆಗಳು ಹೆಚ್ಚು ಸೇವಾ ಕಾರ್ಯಗಳನ್ನು ಮಾಡಿದರೆ ಅವುಗಳಿಂದ ಫಲಾನುಭವಿಗಳು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಲಯನ್ ಹೆಚ್.ಸಿ. ಕಾಂತರಾಜು ತಿಳಿಸಿದರು.

ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ 317 ಜಿ ಜಿಲ್ಲೆಯ ಪ್ರಾಂತೀಯ 2 ರ ವಲಯ 1 ಮತ್ತು ವಲಯ 2 ರ ಜೊನ್ ಅಡ್ವೈಸರಿ ಸಭೆಯಲ್ಲಿ ವಲಯ ಅಧ್ಯಕ್ಷ ಲಯನ್ ಹೆಚ್.ಸಿ. ಕಾಂತರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಲಯ 2 ರ ಅಧ್ಯಕ್ಷ ಲಯನ್ ಡಾ.ಆರ್ ಸಿ ಮೈತ್ರಿಯ ಅವರು ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಾಂತೀಯ ಅಧ್ಯಕ್ಷ ಲಯನ್ ಕೆ.ಆರ್ ‌‌ಭಾಸ್ಕರಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾರ್ಚ್ 15 ರಂದು ನಡೆಯುವ ಪ್ರಾಂತೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಎಲ್ ಸಿ ಐ ಎಫ್ ಜಿಲ್ಲಾ ಅಧ್ಯಕ್ಷ ಡಾ.ಆರ್. ಡಿ.ಕುಮಾರ್ ಮಾತನಾಡಿ ಸದಸ್ಯರು ಎಲ್ ಸಿ ಐ ಎಫ್ ಗೆ ದೇಣಿಗೆ ನೀಡಿದರೆ ಆ ದೇಣಿಗೆಯ ಹಣ ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಅಂಬಾಸಿಡರಸ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ವಿ ಶ್ರೀಧರ್, ಬಾಂಧವ್ಯ ಸಂಸ್ಥೆಯ ಆಡಳಿತಾಧಿಕಾರಿ ಲಯನ್ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾಧ್ಯಕ್ಷ ಲಯನ್ ಸಿ ಆರ್ ದಿನೇಶ್ ಅವರು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಆಫ್ ಮೈಸೂರ್ ಅಂಬಾಸಿಡರ್ಸ್ ವಿವೇಕಾನಂದ, ಪ್ಲಾಟಿನಂ, ಕಂಠೀರವ, ಎಲ್ಐಟ್ ಬಾಂಧವ್ಯ, ವೆಸ್ಟ್,ಗೊಲ್ಡನ್ ಸಿಟಿ,ಚಾಮುಂಡಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.