ಮೈಸೂರು: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ 317ಜಿ ಜಿಲ್ಲೆಯ ನೂತನ ಜಿಲ್ಲಾ ಸಂಪುಟ ಕಾರ್ಯದರ್ಶಿಯಾಗಿ ಲಯನ್ ಟಿ.ಹೆಚ್. ವೆಂಕಟೇಶ್ ಅವರು ಆಯ್ಕೆಯಾಗಿದ್ದಾರೆ.
ಟಿ ಎಚ್ ವೆಂಕಟೇಶ್ ಅವರು ಮೈಸೂರು ಅಂಬಾಸಿಡರಸ್ ಲಯನ್ಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಜೆ.ಕೆ.ಟೈರ್ ನಿವೃತ್ತ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಯನ್ ಡಾ. ಆರ್. ಡಿ ಕುಮಾರ್ ಸಂಸ್ಥೆಯ ಪರವಾಗಿ ಟಿ ಎಚ್ ವೆಂಕಟೇಶ್ ಅವರನ್ನು
ಅಭಿನಂದಿಸಿದರು.
ಈ ವೇಳೆ ಕಾರ್ಯದರ್ಶಿ ಕೆ .ಟಿ ವಿಷ್ಣು, ಖಜಾಂಚಿ ಡಾ.ಜಿ.ಕಿಶೋರ್, ಪ್ರಾಂತೀಯ ಅಧ್ಯಕ್ಷರಾದ ಎಚ್ ಸಿ ಕಾಂತರಾಜು, ಜಿಲ್ಲಾ ಅಧ್ಯಕ್ಷರಾದ ಮಾಕಳ ಶಿವಕುಮಾರ್, ವಿ. ಶ್ರೀಧರ್, ಸಿ.ಆರ್ ದಿನೇಶ್ ಹಾಗೂ ಸಂಸ್ಥೆಯ ಸದಸ್ಯರಾದ ಹೆಚ್ .ಕೆ.ಪ್ರಸನ್ನ ,ಮನು, ರವಿ ,ಅಂಬಾಡಿ ಮಾಧವ್, ಕರುಣಾಕರ್ ,ವರ್ಧನ್ ,ಮಂಜುರಾಮ್, ನಾಗರಾಜ್ ಯಶೋದಮ್ಮ, ಭಾಸ್ಕರಾನಂದಾ,ಮಲ್ಲಿಕಾರ್ಜುನಪ್ಪ ,ಅರುಣ್ ಸಾಗರ್, ರಾಮಚಂದ್ರ, ಪುಟ್ಟಸ್ವಾಮಿ,ಬೆಕ್ಯಾ ರವಿಕುಮಾರ್ , ಮಹದೇವ ಪ್ರಸಾದ್ ಹಾಜರಿದ್ದರು.