ಶ್ರೀ ಬಸವಯೋಗಿ ಪ್ರಭುಗಳ ನೇತೃತ್ವದಲ್ಲಿಮೌಢ್ಯ ತೊರೆದು ಕಚೇರಿ ಪ್ರಾರಂಭೋತ್ಸವ

ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಅನಾಥಾಲಯ ಬಿಲ್ಡಿಂಗ್ ನಲ್ಲಿ ವಕೀಲ ತೋಂಟದಾರ್ಯ ಕೆ.ಎಸ್ (ಅಭಿ ) ತಮ್ಮ ಕಚೇರಿಯನ್ನು ಬಸವಣ್ಣನವರ ಭಾವಚಿತ್ರ ಮತ್ತು ಸಂವಿಧಾನ ಪೀಠಕೆಗೆ ಪುಷ್ಪ ನಮನ ಮಾಡುವ ಮೂಲಕ ಪ್ರಾರಂಭಿಸಿದರು.

ತೋಂಟದಾರ್ಯ ಅವರು
ಮೈಸೂರು ಜಿಲ್ಲೆ ಹೆಚ್ .ಡಿ .ಕೋಟೆ ತಾಲ್ಲೂಕು ಕಂಚಮಳ್ಳಿ ಗ್ರಾಮದವರು.

ಕಚೇರಿಯ ಪ್ರಾರಂಭೋತ್ಸವದ ನೇತೃತ್ವವನ್ನು ಪೂಜ್ಯ ಬಸವಯೋಗಿಪ್ರಭು ಸ್ವಾಮೀಜಿಗಳು ವಹಿಸಿ ನಿಜಾಚರಣೆ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.

ವಚನಗಳ ಪಠಣೆಯ ಮೂಲಕ ವಕೀಲ ತೋಂಟದಾರ್ಯರವರಿಗೆ ಆಶೀರ್ವದಿಸಿ ವಕೀಲ ವೃತ್ತಿಯನ್ನು ಯಶಸ್ವಿಯಾಗಿ ನಡೆ‌ಸಿಕೊಂಡು ಹೋಗಲಿ ಎಂದು ಹಾರೈಸಿದರು.

ವಿಧಾನಪರಿಷತ್ ಸದಸ್ಯ ವಿನಯ್,ಹಿರಿಯ ವಕೀಲ ಸುರೇಶ್, ಜಾ .ಲಿಂ ಮ ಕಾರ್ಯದರ್ಶಿಗಳಾದ ಉಷಾ ,ಪ್ರೊ . ನಾಗೇಂದ್ರ ಮೂರ್ತಿ, ತೋಂಟದಾರ್ಯ ಅವರ ತಂದೆತಾಯಿಗಳಾದ ನಾಗರಾಜು ಮತ್ತು ಶಿವನಂಜಮ್ಮ ಹಾಜರಿದ್ದು ವೃತ್ತಿ ಬದುಕು ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಈ ವೇಳೆ ಪೂಜ್ಯ ಬಸವಯೋಗಿಪ್ರಭುಗಳು ಮಾತಾಡಿ ಇಂದು ಹುಣ್ಣಿಮೆ ಮತ್ತು ಮೂಲ ಎಂದು ಜನ ಶುಭ ಕಾರ್ಯಗಳನ್ನು ಮಾಡುವುದಿಲ್ಲ ,ಆದರೆ ಬಸವಾದಿ ಶರಣರ ಆಶಯದಂತೆ ಮೌಢ್ಯ ಮತ್ತು ಕಂದಾಚಾರಗಳನ್ನು ಬದಿಗೊತ್ತಿ ವಕೀಲ ತೋಂಟದಾರ್ಯ ಅವರು ತಮ್ಮ ಕಚೇರಿಯನ್ನು ಪ್ರಾರಂಭ ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು.

ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ವಚನವನ್ನು ಹೇಳಿ ನೊಂದು ಬಂದಿರುವವರೆಗೆ ಮುಖ್ಯವಾಗಿ ಬಡವರಿಗೆ ಸಹಾಯ ಮಾಡಲಿ ಎಂದು ಹಾರೈಸಿದರು .

ಸರಗೂರಿನ ಬಸವತತ್ವ ಪ್ರಚಾರಕರಾದ ಶಿವಶಂಕರಪ್ಪ ಪ್ರಧಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ನಿಜಾಚರಣೆ ಮೂಲಕ ಕಚೇರಿ ಪ್ರಾರಂಬಭಿಸಿದ ವಕೀಲ ತೋಂಟದಾರ್ಯ ರವರಿಗೆ ಬಸವಾದಿಶರಣರ ಕೃಪೆ ಸದಾ ಇರಲೆಂದು ಹಾರೈಸುವುದಾಗಿ ಪ್ರಸನ್ನ .ಎಸ್ .ಎಂ ತಿಳಿಸಿದ್ದಾರೆ.