ಕನ್ನಡ ಕಾನೂನು ಮಾಸಪತ್ರಿಕೆ ಲಾಗೈಡ್ ಬೆಳ್ಳಿಹಬ್ಬ ಆಚರಣೆ

ಮೈಸೂರು: ಕನ್ನಡ ಕಾನೂನು ಮಾಸಪತ್ರಿಕೆ ಲಾಗೈಡ್ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬವನ್ನು ಆಚರಿಸಲಾಯಿತು.

ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಜಿ ಉಮಾ ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಲಾಗೈಡ್ ಹಾಗೂ ಅದರ ಗೌರವ ಸಂಪಾದಕರಾದ ಎಚ್ ಎನ್ ವೆಂಕಟೇಶ್ ಅವರ ಕಾರ್ಯವೈಖರಿ, ಸಮಾಜ ಸೇವೆ, ನೆರವಿನ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಹಿರಾತು ರಹಿತ ಪತ್ರಿಕೆ ಹೊರ ತರುತ್ತಿರುವ ಬಗ್ಗೆ ಆಶ್ಚರ್ಯದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಐಜಿಪಿ ಡಿ ಎನ್ ಮುನಿಕೃಷ್ಣ, ಶಾಸಕ ಎ ಮಂಜು, ಮೈಸೂರು ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜ್ ಪಾಲ್ಗೊಂಡಿದ್ದರು.

ಇದೇ ವೇಳೆ ನಿವೃತ್ತ ನ್ಯಾಯಾಧೀಶರು ಸೇರಿ ಹಲವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರುಗಳಾದ ಸಿ ಜಿ ಹುನಗುಂದ, ರಾಜಾ ಸೋಮಶೇಖರ್, ಎಚ್ ಎಸ್ ಹೊಸಗೌಡರ್, ಶಶಿಕಲಾ, ಅಂಗಡಿ ಹರೇಮಠ್, ಜೆ ಎಸ್ ಎಸ್ ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ ಸುರೇಶ್, ಕಾವೇರಿ ನೀರಾವರಿ ಎಂ ಡಿ ಮಹೇಶ್ ಅವರನ್ನು ಗೌರವಿಸ ಲಾಯಿತು.‌

ಹಿರಿಯ ವಕೀಲ ಎಂ ಡಿ ಹರೀಶ್ ಕುಮಾರ್ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್, ಮಾಜಿ ಅಧ್ಯಕ್ಷ ಜಿ ವಿ ರಾಮಮೂರ್ತಿ ಹಿರಿಯ ಪತ್ರಕರ್ತ ಎಂ ಬಿ ಮರಮ್‌ಕಲ್, ಡಿ ವೈ ಎಸ್ ಪಿ ಗಳಾದ ಕೆ ಎನ್ ಯಶವಂತ ಕುಮಾರ್ ಧರ್ಮೇಂದ್ರ, ನಿವೃತ್ತ ಎಸಿಪಿ ಆರ್ ಗಿರಿಜೇಶ್, ಮರಿಯಪ್ಪ, ಸರ್ಕಾರಿ ಅಭಿಯೋಜಕ ಉಪ ನಿರ್ದೇಶಕರಾದ ಬಿ ಪಿ ಮಂಜುನಾಥ್, ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಪತ್ರಕರ್ತರಾದ ಕೆ ಪಿ ನಾಗರಾಜ್, ರಾಮ್, ಮಿಲ್ಟನ್, ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಉಪನ್ಯಾಸಕ ಎಚ್ ಎನ್ ಗಿರೀಶ್, ಕಾನೂನು ವಿದ್ಯಾರ್ಥಿ ರೋಹನ್ ವಿ ಗಂಗಡ್ಕರ್, ಉದ್ಯಮಿ ತಿಮ್ಮಯ್ಯ, ವಕೀಲ ರಾಜೇಶ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.