ಹಾಸನ: ಹೆತ್ತು,ಹೊತ್ತು ಕಷ್ಟಪಟ್ಟು ಸಾಕಿ ಸಲಹ ವಿದ್ಯಾವಂತರನ್ನಾಗಿ ಮಾಡಿದ ತಂದೆ – ತಾಯಿಯನ್ನ ಪ್ರೀತಿಯ ಹೆಸರಲ್ಲಿ ದುಃಖ ಕ್ಕೆ ಈಡು ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.ಇದಕ್ಕೆ ಹಸನದಲ್ಲೊಂದು ಉದಾಹಣೆ ಇದೆ.
ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿದ್ದ ವಿವಾಹ ಕೊನೆ ಕ್ಷಣದಲ್ಲಿ ಮುರಿದು ಬಿದ್ದಿದೆ.
ಲಕ್ಷಾಂತರ ರೂ ವೆಚ್ಚ ಮಾಡಿ ಮದುವೆ ಸಿದ್ದವಾಗಿದ್ದುದು ಎಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಈ ಮದುವೆ ಬೇಡ ಎಂದು ವಧು ಎದ್ದು ಹೋಗಿಬಿಟ್ಟಿದ್ದಾಳೆ.
ಎಲ್ಲವೂ ಸರಿಯಾಗಿದ್ದರೆ ಹಾಸನ ತಾಲ್ಲೂಕು ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಅವರ ವಿವಾಹ ನಡೆದು ಎಲ್ಲೆಲ್ಲೂ ಸಂಭ್ರಮ ಮನೆಮಾಡಿರುತಿತ್ತು.
ಆದರೆ ಆ ಒಂದು ಫೋನ್ ಕಾಲ್ ಎಲ್ಲವನ್ನು ಸಮಾಧಿ ಮಾಡಿಬಿಟ್ಟಿದೆ,
ಮುಹೂರ್ತದ ವೇಳೆ ಯುವತಿಗೆ ಫೋನ್ ಕರೆ
ಬಂದಿದೆ,ತಕ್ಷಣ ಎದ್ದು ನಿಂತ ವಧು
ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಮದುವೆ ಬೇಡ ಎಂದು ಹೇಳಿ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.
ಯುವತಿಯ ಮನವೊಲಿಸಲು ತಂದೆ,ತಾಯಿ,ಸಂಬಂಧಿಕರು ಎಷ್ಟು ಪ್ರಯತ್ನಪಟ್ಟರೂ ವಧು ಪಲ್ಲವಿಯದು ಒಂದೇ ಹಟ.ನನಗೆ ಈ ಮದುವೆ ಬೇಡ ಎನ್ನುವುದೇ ಆಯಿತು.
ಯುವತಿಯ ಈ ಹಠ ನೋಡಿ ಬೇಸತ್ತ ವರ ವೇಣುಗೋಪಾಲ ಕೂಡಾ ನನಗು ಈ ಮದುವೆ ಬೇಡ ಎಂದು ಹೇಳಿದ್ದಾರೆ.
ಮತ್ತೇನೂ ಮಾಡಲಾಗದೆ ಕಡೆ ಗಳಿಗೆಯಲ್ಲಿ ಮದುವೆ ನಿಂತು ಹೋಗಿದೆ. ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿದರೂ ಏನೂ ಪ್ರಯೋಜನವಾಗಲಿಲ್ಲ.
ಕಲ್ಯಾಣಮಂಟಪಕ್ಕೆ ಆಗಮಿಸಿದ್ದ ವಧು-ವರನ ಕಡೆಯ ನೂರಾರು ಮಂದಿ ತಮಗಿಷ್ಟಬಂದಂತೆ ಮಾತನಾಡುತ್ತಾ ಬೇಸರದಿಂದಲೇ ಹೊರನಡೆದರೆ ಇತ್ತ ಮಗಳು ಮದುವೆ ನಿಲ್ಲಿಸಿದ್ದಕ್ಕೆ ದಿಕ್ಕು ತೋಚದ ಪೋಷಕರು ಕಣ್ಣೀರಿಟ್ಟು ವಿಲ ವಿಲಾ ಒದ್ದಾಡಿದ್ದಾರೆ
ಈಶ್ವರಹಳ್ಳಿ ಕೂಡಿಗೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವೇಣುಗೋಪಾಲ ಶಿಕ್ಷಕನಾಗಿದ್ದಾರೆ.ಪಲ್ಲವಿ ಸ್ನಾತಕೋತ್ತರ ಪದವಿ ಓದಿದ್ದಾರೆ. ಆದರೆ ಪಲ್ಲವಿ ಹೆತ್ತ ಒಡಲಿಗೆ ಬೆಂಕಿ ಹಚ್ಚಿದ್ದಾರೆ.