ಅವಧೂತ ದತ್ತ ಪೀಠದಲ್ಲಿ :ಲಲಿತಾ ಸಹಸ್ರನಾಮ ಪಾರಾಯಣ, ಕೋಟಿ ಕುಂಕುಮಾರ್ಚನೆ

Spread the love

ಮೈಸೂರು: ಮೈಸೂರಿನ ಅವಧೂತ ದತ್ತ ಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ಒಂದು ಸಾವಿರ ಭಕ್ತಾದಿಗಳಿಂದ 10 ಬಾರಿ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ ಹಮ್ಮಿಕೊಳ್ಳಲಾಗಿದೆ.

ಆಶ್ರಮದ ನಾದಮಂಟಪದಲ್ಲಿ ಜುಲೈ 18 ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಒಂದು ಗಂಟೆವರೆಗೆ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕೋಟಿ ಕುಂಕುಮಾರ್ಚನೆ ಮಾಡಲು ಸಂಕಲ್ಪಿಸಲಾಗಿದೆ.

ಪೂಜ್ಯ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅನುಗ್ರಹ ಮತ್ತು ಶ್ರೀ ವಿಜಯನಂದ ತೀರ್ಥ ಸ್ವಾಮೀಜಿಯವರ ಅನುಗ್ರಹದೊಂದಿಗೆ ಈ ಕಾರ್ಯಕ್ರಮಗಳು ನಡೆಯಲಿದೆ.

ಮಹಾಲಕ್ಷ್ಮಿ ಸ್ವರೂಪರಾದ ಸ್ತ್ರೀಯರಿಗೆ ದೀರ್ಘ ಸೌಮಾಂಗಲ್ಯ ಭಾಗ್ಯ ಉಂಟಾಗಬೇಕು ಎಂಬ‌ ಸಂಕಲ್ಪದೊಂದಿಗೆ ಮತ್ತು ಮಹಾವಿಷ್ಣು ಸ್ವರೂಪರಾದ ಪುರುಷರಿಗೆ ಆಯಸ್ಸು, ಅಭಿವೃದ್ಧಿ ಆಗಬೇಕು ಎಂಬ ಆಲೋಚನೆ ಯೊಂದಿಗೆ ಪೂಜ್ಯ ಸ್ವಾಮೀಜಿಯವರು ಈ ಕಾರ್ಯಕ್ರಮವನ್ನು ಸಂಕಲ್ಪಿಸಿದ್ದಾರೆ.

ಭಕ್ತರು ಈ ಮಹಾ ಪಾರಾಯಣದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಪೂಜೆಯ ನಂತರ ಮಧ್ಯಾಹ್ನ ಅನ್ನಪ್ರಸಾದ ಇರಲಿದೆ ಎಂದು ಅವಧೂತ ದತ್ತಪೀಠ ತಿಳಿಸಿದೆ.