ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಸ್ಮರಣೀಯ:ನಜರಬಾದ್ ನಟರಾಜ್

Spread the love

ಮೈಸೂರು: ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸೇವೆ ಎಂದಿಗೂ ಸ್ಮರಣೀಯ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹೇಳಿದರು.

ಶನಿವಾರ ಮೈಸೂರಿನ ನಜರಬಾದ್ ಚಾಮುಂಡೇಶ್ವರಿ ಬಳಗದ ಕಚೇರಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿ ಅತಿ ಕಡಿಮೆ ಸಮಯದಲ್ಲಿ ತಮ್ಮ ಉದಾತ್ತ ನೀತಿಗಳು ಮತ್ತು ಪ್ರಭಾವಶಾಲಿ ಘೋಷಣೆಗಳಿಂದ ರಾಷ್ಟ್ರದ ಆಕಾರವನ್ನು ಬದಲಾಯಿಸಿದರು ಎಂದು ಹೇಳಿದರು.

1965 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಜೈ ಜವಾನ್, ಜೈ ಕಿಸಾನ್ ಎಂಬ ಜನಪ್ರಿಯ ಘೋಷಣೆ ಮಾಡಿದರು ಎಂದು ನಜರಬಾದ್ ನಟರಾಜ್ ಸ್ಮರಿಸಿದರು.

ಹೊಯ್ಸಳ ಟ್ರಸ್ಟ್ ಸಂಸ್ಥಾಪಕ ರಾಜೇಶ್ ಪಳನಿ ಮಾತನಾಡಿ,ಶಾಸ್ತ್ರೀ ಜೀ ಅವರು ಯಾವುದೇ ಸಂದರ್ಭದಲ್ಲೂ ಶಾಂತಿ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ನಂಬಿಕೆಯ ಮಂತ್ರ ಎಂದು ನಂಬಿ ನಮಗಾಗಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರಿಗೆ ಶಾಂತಿಯ ಸಂದೇಶ ಸಾರಿದ ಮಹಾನ್ ಚೇತನ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್, ಕಾಂಗ್ರೆಸ್ ಹಿಂದುಳಿದ ವರ್ಗದ ರಮೇಶ ರಾಮಪ್ಪ, ವರುಣ ಪ್ರಕಾಶ್, ಅಂಬಾ ಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟ್ಕೆ, ಚಾಮುಂಡೇಶ್ವರಿ ಬಳಗದ ಲೋಕೇಶ್, ಮಂಜುನಾಥ್ ಗೌಡ ಮರಟಿಕ್ಯಾತನಹಳ್ಳಿ ಮತ್ತು ಸುನಿಲ್ ನಾರಾಯಣ್,ಸೇವಾ ದಾಳ ಮೋಹನ್, ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.