ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ದಸರಾಕ್ಕೆ ಆಗಮಿಸಿರುವ ಲಕ್ಷ್ಮಿ ಆನೆ ಇದ್ದಕ್ಕಿದ್ದಂತೆ ಮಾವುತನ ಹಿಡಿತಕ್ಕೆ ಸಿಗದೆ ಓಡಾಡತೊಡಗಿ ಜನಸಾಮಾನ್ಯರು ಗಾಬರಿಗೊಳ್ಳುವಂತೆ ಮಾಡಿತು.

ಮಧ್ಯಾಹ್ನ ಲಕ್ಷ್ಮಿ ಜನರಿಗೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಮಾವುತ ಬಿಗಿ ಭದ್ರತೆಯಲ್ಲಿ ಕರೆತರುತ್ತಿದ್ದರು.
ಆಗ ಅದೇನಾಯಿತೊ ಏನೋ ಲಕ್ಷ್ಮೀ ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿ ಓಡತೊಡಗಿತು.ಜನ ಆತಂಕಗೊಂಡು ಅತ್ತ,ಇತ್ತ ಓಡಿದರು.
ಅಂಗಡಿ ಮುಂಗಟ್ಟಿನವರು,ರಸ್ತೆ ಬದಿ ವ್ಯಾಪಾರಿಗಳು,ಅಲ್ಲಿದ್ದ ಮಹಿಳೆಯರು ಮತ್ತಿತರರು ಪ್ರಾಣಾಪಾಯದಿಂದ ಓಡಿ ಪಾರಾದರು.

ಲಕ್ಷ್ಮಿಯ ಮೇಲೆ ಕುಳಿತಿದ್ದ ಮಾವುತ ಸಮಾಧಾನ ಪಡಿಸಲು ಸತತ ಪ್ರಯತ್ನ ಮಾಡಿದರು.ತಕ್ಷಣ ಇತರೆ ಮಾವುತರು ಕಾವಾಡಿಗರು ಪೊಲೀಸರು ಹಿಂದೆಯೇ ಓಡಿ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ನಂತರ ಲಕ್ಷ್ಮಿ ಆನೆಯನ್ನು ಲಾರಿಗೆ ಹತ್ತಿಸಿ ಶ್ರೀರಂಗಪಟ್ಟಣದ ಬನ್ನಿಮಂಟಪಕ್ಕೆ ಕರೆದೊಯ್ದರು.