ಮೈಸೂರು: ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕತರ್ನಾಕ್ ಯುವತಿಯೊಬ್ಬಳು 30 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ನಡೆದಿದೆ.
ರಾಜಕುಮಾರ್ ಎಂಬವರು ಮೋಸಕ್ಕೊಳಗಾದ ವ್ಯಕ್ತಿ. ಲಾವಣ್ಯ ಎಂಬಾಕೆ ವಿರುದ್ದ ಆರೋಪ ಮಾಡಿರುವ ರಾಜಕುಮಾರ್ ದೂರು ಕೊಟ್ಟಿದ್ದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲವಾಲ ಗ್ರಾಮದ ಲಾವಣ್ಯ ಟ್ರೇಡಿಂಗ್ ಹೆಸರಿನಲ್ಲಿ ಹಣದ ಆಸೆ ತೋರಿಸಿ 30ಲಕ್ಷ ಹಣ ಪಡೆದು ಪರಾರಿಯಾಗಿದ್ದಾಳೆ ಎಂದು ದೂರಲಾಗಿದೆ.
ಕೆಲ ತಿಂಗಳ ಹಿಂದೆ ಆನ್ಲೈನ್ ಮೂಲಕ ರಾಜಕುಮಾರ್ ಹಣ ಕಳುಹಿಸಿದ್ದರಂತೆ ಈ ಹಿಂದೆ ಲಾವಣ್ಯ ಅಕ್ಕ ಶ್ರುತಿ ಟ್ರೇಡಿಂಗ್ ಹೆಸರಲ್ಲಿ ಹಣ ಪಡೆದು ಮೋಸ ಮಾಡಿ ಜೈಲು ಪಾಲಾಗಿದ್ದರು.
ಶ್ರುತಿಗೂ ಹಣ ಕೊಟ್ಟಿದ್ದ ರಾಜಕುಮಾರ್ ಆಕೆಯ ತಂಗಿ ಎಂದು ನಂಬಿ ಹಣ ಕೊಟ್ಟು ಮತ್ತೆ ಮೋಸ ಹೋಗಿದ್ದಾರೆ.
ಲಾವಣ್ಯ ಹಲವಾರು ಜನರ ಬಳಿ ಇದೇ ರೀತಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ರಾಜಕುಮಾರ್ ಆರೋಪಿಸಿದ್ದಾರೆ.