ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ರ ಪ್ರಯುಕ್ತ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದಕ್ಕಾಗಿ ದಸರಾ ಉಪಸಮಿತಿಗಳನ್ನು ರಚನೆಮಾಡಿದ್ದು,ಮೈಸೂರಿನ ವಿವಿಧ ಭಾಗಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಕುವೆಂಪುನಗರದ ಗಾನಭಾರತಿಯಲ್ಲಿ ಪ್ರಖ್ಯಾತ ಗಾಯಕರಾದ ಮೈಸೂರು ಮಹಾಲಿಂಗು, ಪ್ರಿಯಾ ಹಾಗೂ ಕುಮಾರಿ ಚಿನ್ಮಯಿ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಜನರ ಮನಸ್ಸು ಸೂರೆಗೊಂಡರು.
ಇವರಿಗೆ ಪಕ್ಕ ವಾದ್ಯದಲ್ಲಿ ರಿದಮ್ ಪ್ಯಾಡ್ ದತ್ತ,ತಬಲ ಕಿರಣ್ ಹಾಗೂ ಕೀಬೋರ್ಡ್ ರಾಜೇಶ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು.