ಕುಟೀರ ಯೋಜನೆಯಡಿ ಬಡ ವಿಪ್ರ ಫಲಾನುಭವಿಗಳಿಗೆ ಮನೆ:ಭಾನುಪ್ರಕಾಶ್ ಶರ್ಮ ಭರವಸೆ

Spread the love

ಮೈಸೂರು: ರಾಜ್ಯದ ವಿಪ್ರ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ,ಇನ್ನಷ್ಟು ಕೆಲಸ ಮಾಡಲು ಈ ಬಾರಿಯ ಮಹಾಸಭಾ ಚುನಾವಣೆಯಲ್ಲಿ ಆಶೀರ್ವದಿಸಬೇಕೆಂದು
ಎಕೆಬಿಎಂಎಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಭಾನುಪ್ರಕಾಶ್ ಶರ್ಮಾ ಕೋರಿದರು.

ಮೈಸೂರಿನ 2 ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿಗಳಾದ ಡಿ ಟಿ ಪ್ರಕಾಶ್ ಹಾಗೂ ಜಗದೀಶ್ ಕುಮಾರ್ ಅವರಿಗೂ ಸಹ ಆಶೀರ್ವದಿಸಬೇಕೆಂದು ಭಾನುಪ್ರಕಾಶ್ ಶರ್ಮಾ ಮನವಿ ಮಾಡಿದರು

ನಗರದ ಅಗ್ರಹಾರದ ಶಂಕರ ಮಠದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ವಿಪ್ರರ ಸಂಘಟನಾ ಸಭೆ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣಾ ಪ್ರಚಾರ ಸಭೆಯನ್ನು ದೀಪ ಬೆಳಗಿಸಿ ನಂತರ ಆಚಾರ್ಯತ್ರಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.

ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ, ಏ.13 ರಂದು ಏಕಕಾಲಕ್ಕೆ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ, ಮೈಸೂರು ಜಿಲ್ಲಾ ಘಟಕದ 2 ಸ್ಥಾನಕ್ಕೆ ಆಕಾಂಕ್ಷಿಗಳಾದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕುಮಾರ್ ಕೆ ಆರ್
ಸ್ಪರ್ಧಿಸಿದ್ದಾರೆ ಅವರನನ್ನೂ ಬೆಂಬಲಿಸಿ ಎಂದು ಮನವಿ ಮಾಡಿದರು

10 ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪೂರ್ವ ಸಂಕಲ್ಪಪತ್ರ (ಪ್ರಣಾಳಿಕೆ) ಹೊರಡಿಸಿದ್ದು, ಮಹಿಳಾ ಸಮಾವೇಶ, ಧಾರ್ಮಿಕ ಶಿಕ್ಷಣ ತರಬೇತಿ ಸೇರಿದಂತೆ ಸಂಘಟನೆಯ ಮೂಲಕ ಸಮುದಾಯದ ಎಲ್ಲ ಪಂಗಡಗಳ
ಮತ್ತು ಉಪ ಪಂಗಡಗಳ ಅರ್ಹರನ್ನು ಮಹಾಸಭಾದ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಕುಟೀರ ಎಂಬ ಯೋಜನೆಯ ಮೂಲಕ ಬಡ ವಿಪ್ರ ಅರ್ಹ ಫಲಾನು-ಭವಿಗಳನ್ನು ಗುರುತಿಸಿ ಅಂದಾಜು 5 ಲಕ್ಷ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು, ಪ್ರಮುಖ ನಗರಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸಮಾಜದ ಕಲ್ಯಾಣಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದು ಭಾನುಒ್ರಕಾಶ್ ಶರ್ಮ ಹೇಳಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಎಚ್ ಎಸ್ ಸಚ್ಚಿದಾನಂದಮೂರ್ತಿ ಅವರು ಮಾತನಾಡಿ,
ಭಾನುಪ್ರಕಾಶ್ ಶರ್ಮ ಕಳೆದ 30 ವರ್ಷಗಳಿಂದ ಮಹಾಸಭಾದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಶೋಕ ಹಾರನಹಳ್ಳಿಯವರ ಮಾರ್ಗದರ್ಶನದಲ್ಲಿ ಮೂರು ವರ್ಷ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಸನಾತನಧರ್ಮದ ಉಳಿವಿಗಾಗಿ ಹಲವು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಹೆಚ್ ಪಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.
14 ವರ್ಷ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ವಿವರಿಸಿದರು.

ದಕ್ಷಿಣ ಭಾರತದ ಪುರೋಹಿತ ಸಂಘದ ಉಪಾಧ್ಯಕ್ಷರಾಗಿದ್ದಾರೆ,ಅವರನ್ನ ಗೆಲ್ಲಿಸಿ ಹಾಗೆಯೇ ಮೈಸೂರು ಜಿಲ್ಲಾ ಪ್ರತಿನಿಧಿ ಡಿ ಟಿ ಪ್ರಕಾಶ್ ಹಾಗೂ ಜಗದೀಶ್ ಕುಮಾರ್ ಅವರನ್ನೂ ಬೆಂಬಲಿಸುವ ಮೂಲಕ ವಿಪ್ರ ಸಂಘಟನೆಗೆ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಕಡಕೋಳ ಜಗದೀಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ ಆರ್ ನಾಗರಾಜ್, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್,ಉದ್ಯಮಿ ರವಿ ಶಾಸ್ತ್ರಿ, ವಿಪ್ರ ಜಾಗೃತಿ ವೇದಿಕೆಯ ಮುಳ್ಳೂರು ಸುರೇಶ್,ವತ್ಸಲ ನಾಗೇಶ್, ಮಂಜುಳಾ ನಾರಾಯಣ, ಆರ್‌ಬಿಐ ಬ್ರಾಹ್ಮಣ ಸಂಘದ ದಿನೇಶ್, ರವಿಶಂಕರ್,ಶ್ರೀನಿವಾಸ್ ಬಾಶ್ಯಮ್, ಮುಳ್ಳೂರು ಗುರುಪ್ರಸಾದ್, ಜಯಸಿಂಹ,ಸುಚೇಂದ್ರ, ನಾಗಶ್ರೀ, ಲತಾ ಬಾಲಕೃಷ್ಣ, ಜ್ಯೋತಿ, ಶ್ರೀನಾಥ್, ಹರೀಶ್, ಮಿರ್ಲೆ ಪನೀಶ್ ಮತ್ತಿತರರು ಹಾಜರಿದ್ದರು.