ಮೈಸೂರು: ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಕಾರಣ, ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಕಾರಣ ಎಂದು ವಾಸವಿ ಕಾನ್ವೆಂಟ್ ಕಾರ್ಯದರ್ಶಿ ಅನಂತ್ ರಾಮು ಹೇಳಿದರು.
ಮೈಸೂರಿನ ಕೂರ್ಗಳಿ ಯಲ್ಲಿರುವ ವಾಸವಿ ಕಾನ್ವೆಂಟ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ
ಕೃಷ್ಣ ಜನ್ಮಾಷ್ಟಮಿ ಹಾಗೂ ಪುಟಾಣಿಗಳು ಶ್ರೀ ಕೃಷ್ಣ ರಾಧೆ ವೇಷ ಧರಿಸಿ ಸಾಂಸ್ಕೃತಿಕ ಚಟುವಟಿಕೆಗಳ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದುಕಿನ ಮೌಲ್ಯ ಅರಿಯುವಲ್ಲಿ, ಬೌದ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆ ಪಸರಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗಿವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನಾ ಗೌಡ, ಧನಲಕ್ಷ್ಮಿ ಅನಂತರಾಮು, ಶಾಲೆಯ ಮುಖ್ಯ ಶಿಕ್ಷಕ ಜಯರಾಮೇಗೌಡ, ಶ್ರೀ ದುರ್ಗ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ನಿಶಾಂತ್, ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಹಾಜರಿದ್ದರು.