ಕುಂದಾಪುರ: ಜಲ ಜಾನಪದೊತ್ಸವ ಜನಪದ ಪರಿಷತ್ತಿನ ವಿಶಿಷ್ಟ ಕಾರ್ಯಕ್ರಮ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಕುಂದಾಪುರ ನಗರದಲ್ಲಿ ಕರ್ನಾಟಕ ಸರ್ಕಾರದ ಡಾಕ್ಟರ್ ಶಿವರಾಮ ಕಾರಂತರ ಟ್ರಸ್ಟ್ ಸದಸ್ಯರಾಗಿ ಆಯ್ಕೆಯಾದ ಪ್ರಯುಕ್ತ ರಂಗೋಲಿ ವಿದ್ವಾಂಸರು ಡಾ ಭಾರತಿ ಮರವಂತೆ ಅವರನ್ನು ಅಭಿನಂದಿಸಿ ಬಾಲಾಜಿ ಮಾತನಾಡಿದರು.

2020ರಲ್ಲಿ ಮೊದಲ ಬಾರಿಗೆ ಗೋಕರ್ಣದ ಸಮುದ್ರ ತೀರದಲ್ಲಿ ಗೋಕರ್ಣದ ದೇಗುಲದ ಸಂಯುಕ್ತ ಆಶ್ರಯದಲ್ಲಿ ಮೊದಲನೇ ಜಲ ಜನಪದ ಉತ್ಸವವನ್ನು ಆಯೋಜಿಸಲಾಗಿತ್ತು, 2023 ರಲ್ಲಿ ಡಾ ಭಾರತಿ ಮರುವಂತೆ ಅವರ ನೇತೃತ್ವದಲ್ಲಿ ಮರುವಂತೆ ಕಡಲ ತೀರದಲ್ಲಿ ವಿಶೇಷವಾದ ಜಲಜನಪದೋತ್ಸವವನ್ನು
ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ಹೇಳಿದರು.
ಇವರು ರಂಗೋಲಿ ಮಾಡಿದ ಸಂಶೋಧನೆಗಳಿಗೆ ಕ್ರಿಯಾಶೀಲತೆಗೆ ಮೆಚ್ಚಿ ಸರ್ಕಾರ ಇವರಿಗೆ ಶಿವರಾಮ ಕೊರಂಟೈನ್ ಟ್ರಸ್ಟ್ ಸದಸ್ಯರಾಗಿ ಮಾಡಿದೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜವಾಬ್ದಾರಿ ನೀಡಲಿ ಎಂದು ಜನಪದ ಎಸ್ ಬಾಲಾಜಿ ಹಾರೈಸಿದರು.
ರಾಮನಗರ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ ಮಾತನಾಡಿ ಡಾ ಭಾರತಿ ಮರವಂತೆ ಅವರು ರಂಗೋಲಿಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಇತರ ಯುವ ಜನರಿಗೆ ಅನುಕರಣೀಯ, ಇವರನ್ನು ಮಾದರಿಯಾಗಿ ಯುವಕರು ರಂಗೋಲಿಯಲ್ಲಿ ಹೊಸ ಪ್ರಯತ್ನ ನಡೆಸಲಿ ಎಂದು ಸಲಹೆ ನೀಡಿದರು.

ಕನ್ನಡ ಜಾನಪದ ಪರಿಷತ್ ಧಾರವಾಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ ಸದಾನಂದ ಜಾನಪದ ಯುವ ಬ್ರಿಗೇಡ್ ರಾಜಾಜಿನಗರ ಸಾಹಸಂಚಾಲಕ ಇಮ್ರಾನ್ ಪಾಷಾ ಉಪಸ್ಥಿತರಿದ್ದರು.