ಜಾತಿಗಣತಿ ವರದಿ ಮರು ಪರಿಶೀಲನೆಗೆಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಬಳಗ ಒತ್ತಾಯ

ಮೈಸೂರು: ರಾಜ್ಯ ಸರ್ಕಾರ ಜಾರಿಮಾಡಲು ಹೊರಟಿರುವ ಜಾತಿಗಣತಿ ವರದಿಯನ್ನು ವಿರೋಧಿಸಿ ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಬಳಗದ‌ ವತಿಯಿಂದ ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಹೆಚ್ ಡಿ ಕುಮಾರ ಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಸಂಸ್ಥಾಪಕ ಜಿಲ್ಲಾಧ್ಯಕ್ಷರಾದ ರಾಮಕೃಷ್ಣೇಗೌಡ, ನಗರ ಅಧ್ಯಕ್ಷ ಕೆ ಆರ್ ಮಿಲ್ ಆನಂದ್ ಗೌಡ, ನಗರ ಘಟಕದ ಅಧ್ಯಕ್ಷೆ ಬಾಬಿತಾ, ಖಜಾಂಚಿ ಪ್ರಸನ್ನ ಗೌಡ ನೇತೃತ್ವದಲ್ಲಿ ಸಹಾಯಕ ಜಿಲ್ಲಾಧಿಕಾರಿ ಶಿವ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ ಜಾರಿ ಮಾಡಲು ಹೊರಟಿರುವ ಜಾತಿಗಣತಿಯ ವರದಿಯು ಅವೈಜ್ಞಾನಿಕವಾಗಿದ್ದು, ವರದಿಯಲ್ಲಿ ಎಲ್ಲಾ ಜಾತಿಗಳ ಜನರನ್ನು ಭೇಟಿ ಮಾಡದೇ ವರದಿಯನ್ನು ತಯಾರಿಸಲಾಗಿದೆ ಎಂದು ಸಂಘದವರು ದೂರಿದರು.

ಕೂಡಲೇ ಇದನ್ನು ಪರಿಶೀಲಿಸಿ ಮರು ಗಣತಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಜಾತಗಣತಿಯು ಅತ್ಯಂತ ಸೂಕ್ಷ್ಮ ವಿಷಯವಾಗಿ ಪರಿವರ್ತನೆ ಆಗಿದ್ದು,ಈ ಜಾತಿಗಣತಿ ಹಲವಾರು ಪಂಗಡ, ಸಮುದಾಯಗಳನ್ನು ಒಡೆಯಲು ಪ್ರಾರಂಭಿಸಿದೆ.

ಕೇವಲ ಆಧಾರ್ ಕಾರ್ಡಿನ ಆಧಾರದ ಮೇಲೆ ಜಾತಿಯನ್ನು ಗುರುತಿಸಲು ಸಾಧ್ಯವಿಲ್ಲ. ಮತ್ತು ಕಾಂತರಾಜು ಆಯೋಗ ಪ್ರತಿ ಮನೆಗೆ ತೆರಳದೆ ವಿವರಗಳನ್ನು ಕಲೆಹಾಕಿರುವುದರಿಂದ ಈ ವರದಿಯು ಅವೈಜ್ಞಾನಿಕವಾಗಿದೆ. ಇದರಿಂದಾಗಿ ಹಲವಾರು ಸಮುದಾಯ ಹಾಗೂ ಪಂಗಡಗಳಿಗೆ ಅನ್ಯಾಯವಾಗುತ್ತದೆ ಹಾಗಾಗಿ ವರದಿಯನ್ನು ಸಾರ್ವಜನಿಕರ ಚರ್ಚೆಗೆ ಬಿಟ್ಟು ನಂತರ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಕೂಡಲೇ ಜಾತಿಗಣತಿ ವರದಿಯನ್ನು ಪುನ‌ರ್ ಪರಿಶೀಲಿಸಿ ಮರು ಜಾತಿಗಣತಿ ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ರಾಮಕೃಷ್ಣೇಗೌಡ,
ಆನಂದ್ ಗೌಡ ಮತ್ತಿತರರು ಒತ್ತಾಯಿಸಿದರು.