ಮೈಸೂರು: ಬೆಂಗಳೂರಿನ ಮೆಜಸ್ಟಿಕ್ ರೀತಿ ರೈಲ್ವೆ ನಿಲ್ದಾಣದ ಬಳಿ ಬಸ್ ನಿಲ್ದಾಣ ಇರುವಂತೆ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಜೆಕೆ ಮೈದಾನ ದಲ್ಲಿ ಬಸ್ ನಿರ್ಮಾಣ ಮಾಡಿದರೆ ನಿಜಕ್ಕು ಎಲ್ಲರಿಗೂ ಒಳಿತಾಗಲಿದೆ ಎಂದು ಸಾಮಾಜಿಕ ಹೋರಾಟಗಾರ ಸಂದೇಶ್ ಮನವಿ ಮಾಡಿದ್ದಾರೆ.
ಬನ್ನಿಮಂಟಪ ದಲ್ಲಿ ನೂತನ ಕೆ.ಎಸ್ .ಅರ್ .ಟಿ .ಸಿ ಬಸ್ ನಿಲ್ದಾಣ ನಿರ್ಮಾಣ ಕ್ಕೆ ತಯಾರಿ ಮಾಡಿ ಡಿಪಿಆರ್ ಸಲ್ಲಿಕೆ ಯಾಗಿರುವ ವರದಿ ಗಮನಿಸಿದ್ದೇನೆ, ಬಸ್ ನಿಲ್ದಾಣ ಪೂರ್ತಿಯಾಗಿ ಸ್ಥಳಾಂತರ ವಾಗದೆ ಹಳೆಯ ಬಸ್ ನಿಲ್ದಾಣವು ಅಲ್ಲೆ ಕಾರ್ಯ ನಿರ್ವಹಿಸುವುದ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಅರ್ಧ ಕೆಲಸ ಮಾಡದೆ, ಯೋಜನ ಬದ್ದವಾಗಿ ಬೆಂಗಳೂರಿನ ಮೆಜಸ್ಟಿಕ್ ರೀತಿ ರೈಲ್ವೆ ನಿಲ್ದಾಣದ ಬಳಿ ಇರುವಂತೆ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಜೆಕೆ ಮೈದಾನ ದಲ್ಲಿ ಬಸ್ ನಿರ್ಮಾಣ ಮಾಡಿದರೆ ಶ್ಲಾಘನೀಯ ಎಂದು ಮಾಧ್ಯಮ ಪ್ಕಟಣೆಯಲ್ಲಿ ಸಂದೇಶ್ ತಿಳಿಸಿದ್ದಾರೆ.
ಹೀಗೆ ಮಾಡಿದರೆ ಯೋಜನ ಬದ್ದವಾಗಿರುತ್ತದೆ ಮತ್ತು ನಗರದ ಭವಿಷ್ಯದ ದೃಷ್ಠಿಯಿಂದಲೂ ಉಪಯುಕ್ತವಾಗಿರುತ್ತದೆ.
ಬಡ ಕಾರ್ಮಿಕರು ಹೆಚ್ಚಾಗಿ ರೈಲನ್ನೆ ಆಶ್ರಯಿಸಿದ್ದಾರೆ,
ಮೈಸೂರಿನ ರೈಲ್ವೆ ನಿಲ್ದಾಣ ದಿಂದ
ಬನ್ನಿಮಂಟಪ 3 ಕಿ.ಮಿ ದೂರದಲ್ಲಿದೆ ಹೋಸದಾಗಿ ನಿರ್ಮಿಸಲು ಹೊರಟಿರುವ ಬಸ್ ನಿಲ್ದಾಣ ಬೇರ ಬೇರೆ ಊರುಗಳಿಂದ ಮೈಸೂರಿಗೆ ಪ್ರಯಾಣ ಮಾಡಿ ಆಗಮಿಸುವ ಪ್ರಯಾಣಿಕರು ಮತ್ತೆ ಆಟೊ ಹತ್ತಿ ಅಥವಾ ಬಸ್ ಗೆ ಕಾದುಕುಳಿತು ಅಲ್ಲಿಗೆ ಪ್ರಯಾಣ ಮಾಡಬೇಕಾಗುತ್ತದೆ ಇದು ಜನ ಸಾಮಾನ್ಯರಿಗೆ ಹೊರೆ ಜತೆಗೆ ಸಮಯ ವ್ಯರ್ಥ ವಲ್ಲದೆ ಮತ್ತಿನೇನೂ ಅಲ್ಲ ಎಂದು ಸಂದೇಶ್ ಹೇಳಿದ್ದಾರೆ.
ಜಿಲ್ಲಾಡಳಿತ ಮತ್ತು ಸಂಬಂದಪಟ್ಟ ಅಧಿಕಾರಿಗಳು ವೈದ್ಯಕೀಯ ಇಲಾಖೆ ಅದೀನದಲ್ಲಿರುವ ಸ್ವತ್ತನ್ನು ಪಡೆಯುವತ್ತ ಗಮನ ಹರಿಸಬೇಕಿದೆ.
ರೈಲ್ವೆ ನಿಲ್ದಾಣದ ಎದುರು ಇರುವ ಜೆ.ಕೆ ಮೈದಾನಕ್ಕೆ, ಗ್ರಾಮಾಂತರ ಬಸ್ ನಿಲ್ದಾಣ ಅಥವ ನಗರ ಬಸ್ ನಿಲ್ದಾಣ ನಿರ್ಮಿಸಿದರೆ ಜನ ಸಾಮಾನ್ಯರಿಗೆ ಅನೂಕೂಲ ವಾಗುತ್ತದೆ ಎಂದು ಸಂದೇಶ್ ಸಲಹೆ ನೀಡಿದ್ದಾರೆ.