ಮೈಸೂರು: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಫೆ.6 ರ ಸಂಜೆ 6 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ಡಿಜಿಟಲ್ ಮೀಡಿಯಾ ಕಾಯಗಾರ ಮತ್ತು ಸಾಧಕ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.

ವಿಶೇಷವಾಗಿ ಇತ್ತೀಚೆಗೆ ಖೊಖೊ ವಿಶ್ವಕಪ್ ಜಯಭೇರಿ ಬಾರಿಸಲು ಪ್ರಮುಖ ಪಾತ್ರ ವಹಿಸಿದ ಕುಮಾರಿ ಚೈತ್ರ ಅವರಿಗೆ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕೆ ಎಸ್ ಡಿ ಎಂ ಎ ಅಧ್ಯಕ್ಷ ಸಿ ಬಸವರಾಜು ಮತ್ತು ನಿರ್ದೇಶಕ ರಕ್ತದಾನಿ ಮಂಜು ಅವರು ತಿಳಿಸಿದ್ದಾರೆ