ಹುಣಸೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹುಣಸೂರು ಜಿಲ್ಲಾ ಶಾಖೆ ವತಿಯಿಂದ ಹುಣಸೂರಿನಲ್ಲಿ ಗುರುವಾರ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಎದ್ದೇಳು ಕನ್ನಡಿಗ ಸಮೃದ್ಧ ಕರ್ನಾಟಕ ಕಟ್ಟಲು, ಕೆಆರ್‌ಎಸ್ ಪಕ್ಷ ಸೇರು ಬಾ ಶಕ್ತಿ ಚೈತನ್ಯ ಪಡೆಯಲು… ಎಂಬ ಎಂಬ ಘೋಷ ವಾಕ್ಯದಡಿ ಹುಣಸೂರಿನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿತ್ತು.
ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ, ಕುಟುಂಬ ರಾಜಕಾರಣ ತೊಲಗಿಸಲಿಕ್ಕಾಗಿ, ನಿರುದ್ಯೋಗ ನಿವಾರಣೆಗಾಗಿ, ರೈತರ ಜೀವನ ಮಟ್ಟ ಸುಧಾರಣೆಗಾಗಿ, ಜನಸ್ನೇಹಿ ವ್ಯವಸ್ಥೆ ಕಟ್ಟಲಿಕ್ಕಾಗಿ, ಸರ್ವ ಜನಾಂಗದ ಅಭಿವೃದ್ಧಿಗಾಗಿ ಕನ್ನಡ ಕರ್ನಾಟಕದ ಅಸ್ಮಿತೆಗಾಗಿ ಕೆ ಆರ್ ಎಸ್ ಪಕ್ಷವನ್ನು ಸೇರುವಂತೆ ಅಭಿಯಾನದಲ್ಲಿ ಜನತೆಗೆ ಕರೆ ನೀಡಲಾಯಿತು.
ಜನರಲ್ಲಿ ತಿಳುವಳಿಕೆ ಮೂಡಿಸಲು ನಮ್ಮ ಪಕ್ಷದ ವತಿಯಿಂದ ಈ ಅಭಿಯಾನವನ್ನು ಹುಣಸೂರು ತಾಲೂಕಿನಲ್ಲಿ ಮಾಡುತ್ತಿದ್ದೇವೆ ಎಂದು ಮುಖಂಡರು ತಿಳಿಸಿದರು.
ರವೀಂದ್ರ ಜಿಲ್ಲಾಧ್ಯಕ್ಷ,
ಹರೀಶ್ ಪ್ರಧಾನ ಕಾರ್ಯದರ್ಶಿ,
ಸ್ವಾಮಿ ಕಾರ್ಮಿಕ ಘಟಕ ಅಧ್ಯಕ್ಷ,
ಸಾಧಿಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಅಭಿಲಾಶ್ , ಹುಣಸೂರು ತಾಲೂಕು ಅಧ್ಯಕ್ಷ,
ಹುಣಸೂರು ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ನಾಗೇಂದ್ರ ಉಪಾಧ್ಯಕ್ಷರು ಹುಣಸೂರು, ಮಣಿ ಗೌಡ ನಂಜನಗೂಡು ತಾಲೂಕು ಅಧ್ಯಕ್ಷರು, ಶೇಖರ್ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರು, ಮಂಜು ತಿರಣಿಮುಂಟೆ ಸರಗೂರು ತಾಲೂಕು ಅಧ್ಯಕ್ಷರು, ರೇವಣ ನಾಯಕ, ಲಿಂಗರಾಜು, ಪ್ರಕಾಶ್, ಸಿದ್ದರಾಜು ದೇಬೂರು, ಉಸ್ಮಾನ್, ಆದರ್ಶ್, ಮಹೇಂದ್ರ, ಮೂರ್ತಿ, ನಾಗರಾಜು ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹುಣಸೂರಿನ ಹೊನ್ನಿಕುಪ್ಪೆ ಗ್ರಾಮದ ಚೆಲುವರಾಜು ಕೂಡ ಪಾಲ್ಗೊಂಡಿದ್ದರು.

