ಕೆ ಆರ್ ಎಸ್ ಪಕ್ಷದವರ ಕಾರ್ಯಚರಣೆಗೆ ಮೂವರು ಪೋಲೀಸರ ತಲೆದಂಡ

Spread the love

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಚೆಕ್ ಪೊಸ್ಟ್ ನಲ್ಲಿ ಖಾಸಗಿ ವ್ಯಕ್ತಿಯಿಂದ ನಡೆಯುತ್ತಿದೆ ಎನ್ನಲಾದ ವಿಚಾರಕ್ಕೆ ಹುಣಸೂರು ವಿಭಾಗದ ಕೆ ಆರ್ ಎಸ್ ಪಕ್ಷದವರು ನಡೆಸಿದ ಕಾರ್ಯಚರಣೆಯ ಭಾಗವಾಗಿ ಮೂವರು ಪೊಲೀಸರ ತಲೆದಂಡವಾಗಿದೆ.

ಆರ್ ಎಸ್ ಪಕ್ಷದವರು ನಡೆಸಿದ ಕಾರ್ಯಚರಣೆಯ ವಿಡಿಯೊ ವೈರಲ್ ಸಂಬಂದ ಇದೀಗ ಚಾಮರಾಜನಗರ ಪೊಲೀಸ್ ಅದೀಕ್ಷಕರಾದ ಬಿ.ಟಿ ಕವಿತಾ ಅವರು ಮೂವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಪೂರ್ವ ಠಾಣಾ ಎಎಸ್ಐ ರವೀಂದ್ರ, ಪೇದೆಗಳಾದ ಸುರೇಶ್ ಹಾಗೂ ಮಹೇಶ್ ಎಂಬ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ಪುಣಜನೂರಿನಲ್ಲಿ ಕಥೆ: ಗೂಡ್ಸ್ ಹೊತ್ತ ಟ್ರಕ್ ಲಾರಿಯು ೨೦,೫೦,೧೦೦ ರೂ ಹೀಗೆ ಪುಣಜನೂರು ಚೆಕ್ ಪೊಸ್ಟ್ ಅಲ್ಲಿ ಲೀಲಾಜಾಲವಾಗಿ ಪೊಲೀಸರ ಸಮಕ್ಷಮದಲ್ಲೆ ಖಾಸಗಿ ವ್ಯಕ್ತಿ ನಿಯೋಜಿಸಿ ವಸೂಲಿ ಮಾಡಲಾಗುತ್ತಿತ್ತು.

ಇದು ಕೇವಲ ಒಂದು ಚೆಕ್ ಪೊಸ್ಟ ಕಥೆಯಲ್ಲ,ರಾಜ್ಯದಲ್ಲಿನ ಹಲವಾರು ಚೆಕ್ ಪೊಸ್ಟ್ ಗಳ ಕಥೆ ಇದೇನೆ.

ಕೆ.ಆರ್.ಎಸ್ ಪಕ್ಷದವರು ಅಲ್ಲಲ್ಲಿ ದಾಳಿ ನಡೆಸಿ ವಿಡಿಯೊ ವೈರಲ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹುಣಸೂರು ವಿಭಾಗದ ಪಕ್ಷದ ಕಾರ್ಯಕರ್ತರು ಪುಣಜನೂರಿಗೆ ಭೇಟಿ ನೀಡಿ ಖಾಸಗಿ ವ್ಯಕ್ತಿ ಹಾಗೂ ಪೊಲೀಸರನ್ನ ಪ್ರಶ್ನಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಒಟ್ಟಾರೆ ಪೊಲೀಸರು ಕೈವೊಡ್ಡಿದರೆ ಕಷ್ಟವಾಗುತ್ತದೆ ಎಂದು ಕೆಲ ಗೃಹರಕ್ಷಕ ಸಿಬ್ಬಂದಿಯನ್ನೊ ಅಥವಾ ಬೇನಾಮಿ ವ್ಯಕ್ತಿಗಳನ್ನ ನಿಯೋಜಿಸಿ ವಸೂಲಿ ಮಾಡುತ್ತಿರುವುದು ಇಂತಹ ಕಾರ್ಯಾಚರಣೆಗಳಿಂದ ಗೊತ್ತಾಗಿದೆ,ಇದಕ್ಕೆ ಪೂರಕ ಎಂಬಂತೆ ವೈರಲ್ ಆದ ವಿಡಿಯೊ ಕೂಡ ಒಂದು ಎಂದರೆ ತಪ್ಪಾಗಲಾರದು.