ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ನಗರ ಉಪಾಧ್ಯಕ್ಷ ಹಾಗೂ ವಾರ್ಡ್ ಉಸ್ತುವಾರಿ ಜೋಗಿಮಂಜು
ತಿಳಿಸಿದರು.
ಸಂಘಟನಾ ಪರ್ವದ ಅಂಗವಾಗಿ ಕೃಷ್ಷರಾಜಕ್ಷೇತ್ರದ ಭಾಜಪ ಘಟಕದಿಂದ ಪ್ರತಿ ಬೂತ್ ವ್ಯಾಪ್ತಿಯಲ್ಲಿ ಬೂತ್ ಅಧ್ಯಕ್ಷರು ,ಕಾರ್ಯದರ್ಶಿಗಳು ಹಾಗೂ ಪೇಜ್ ಪ್ರಮುಖರನ್ನು ನೇಮಕ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ಜೋಗಿ ಮಂಜು ಮಾತನಾಡಿದರು.
ಗುರುವಾರ ಕ್ಷೇತ್ರದ ವಾರ್ಡ್ ನಂಬರ್ 61 ರ ವಿದ್ಯಾರಣ್ಯ ಪುರಂ ವ್ಯಾಪ್ತಿಯ ಸೂಯೆಜ್ ಫಾರಂ ರಸ್ತೆಯಲ್ಲಿ ಇರುವ ಗುರುಸಿದಲಿಂಗೇಶ್ವರ ಮಠದಲ್ಲಿ ಸುಮಾರು 10 ಜನ ಬೂತ್ ಅಧ್ಯಕ್ಷರುಗಳನ್ನು ಚುನಾವಣೆ ಮಾಡುವ ಮೂಲಕ ಅಯ್ಕೆ ಮಾಡಿ ಅವರಿಗೆ ಸಂವಿಧಾನದ ಪೀಠಿಕೆ ಯನ್ನು ಕೊಟ್ಟು ಕಮಲದ ಗುರುತಿನ ಬಾವುಟವನ್ನು ಹಸ್ತಾಂತರ ಮಾಡುವ ಮೂಲಕ ಅಯ್ಕೆ ಮಾಡಲಾಯಿತು.

ಬೂತ್ ಅಧ್ಯಕ್ಷರುಗಳಾಗಿ ಹರಿಯಪ್ಪ,ಮಹದೇವಣ್ಣ,ಅನೂಪ್,ನಳಿನಿ,ಮಂಗಳ,ವೀಣಾ ಪದ್ಮರಾಜ್,ರಾಮು,ನರೇಂದ್ರ ರಾವ್ ಸಿಂಧೆ,ಶಿವಲಿಂಗಸ್ವಾಮಿ,ನರೇಶ್ ಅವರನ್ನು ಬೂತ್ ನವರು ಸೂಚಿಸಿ ಅನುಮೋದನೆ ಮಾಡಿ ನಂತರ ಸಂವಿಧಾನ ಪೀಠಿಕೆ ಯನ್ನು ಓದಿಸುವ ಮೂಲಕ ಅಧ್ಯಕ್ಷರು ಗಳಾಗಿ ಅಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಗೋಪಾಲ ರಾಜ ಅರಸ್, ವಾರ್ಡಿನ ಅಧ್ಯಕ್ಷ ಶಿವಪ್ರಸಾದ್,ನಗರ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ಜರಾಮ್,ಕಿಶೋರ್ ಜೈನ್,ಚಂದ್ರಶೇಖರ್,ಶ್ರೀಧರ್ ಭಟ್, ವಾಸು,ಅಪ್ಪಾಜಿ,ಸಂತೋಷ್ ಕ್ರೇಜಿ ಮತ್ತಿತರರು ಹಾಜರಿದ್ದರು.