ಮೈಸೂರು: ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಶ್ರೀ ಕೃಷ್ಣಾಪುರ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ 7ಕ್ಕೆ ರಾಯರಿಗೆ ಪಂಚಾಮೃತ ಅಭಿಷೇಕ, 9:30ಕ್ಕೆ ಪಾದಪೂಜೆ. ಕನಕಾಭಿಷೇಕ,11:30ಕ್ಕೆ ಅಲಂಕಾರ ಸೇವೆ, 12:30 ಕ್ಕೆ ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
10 ಮತ್ತು 11ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
12ರಂದು ಭಕ್ತಿ ಲಹರಿ. ನುರಿತ ಸಂಗೀತ ವಿದ್ವಾನ್ ರಿಂದ ಸಂಗೀತ ಹಾಗೂ ಭಜನಾ, ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದು,ಪ್ರತಿದಿನ ಸಾವಿರಾರು ಜನರಿಗೆ ಪ್ರಸಾದ ವಿತರಿಸಲಾಯಿತು ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷರಾದ ಎನ್ ಗೋಪಾಲಕೃಷ್ಣನ್, ಉಪಾಧ್ಯಕ್ಷರಾದ ಶ್ರೀವಾತ್ಸ ರಾವ್, ಕಾರ್ಯದರ್ಶಿ ಪಿ ಜಿ ಗುರುಪ್ರಸಾದ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ, ಪಿ ಎಸ್ ಶೇಖರ್, ಕೆ ವಿ ಶ್ರೀಧರ್, ಮಾಜಿ ಅಧ್ಯಕ್ಷರಾದ ಮೋಹನ್, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.