ವಿಶ್ವ ಹಿಂದೂ ಪರಿಷತ್ ನಿಂದ ಕೃಷ್ಣ ವೇಷ ಸ್ಪರ್ಧೆ:ಬಹುಮಾನ ವಿತರಣೆ

Spread the love

ಮೈಸೂರು: ಮೈಸೂರಿನ ಕುವೆಂಪುನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಂತರ್ಶಾಲಾ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು.

ಅಂತರ್ಶಾಲಾ ಕೃಷ್ಣ ವೇಷ ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳು ವಿವಿಧ ಶಾಲೆಗಳಿಂದ ಭಾಗವಹಿಸಿದ್ದರು.

ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂರ್ಣ ಚೇತನ ಪಬ್ಲಿಕ್ ಶಾಲೆಯ ಡಾ. ಪೃಥು ಪಿ ಅದ್ವೈತ್ ಪಡೆದರು, ದ್ವಿತೀಯ ಬಹುಮಾನ ವಿಜಯ ವಿಠಲ ಶಾಲೆಯ ರುತೌನ್ಷಿ ಪಡೆದರು, ತೃತೀಯ ಬಹುಮಾನ ಕರ್ನಾಟಕ ಪಬ್ಲಿಕ್ ಶಾಲೆಯ ಮೋಹಿತಾ ಪಡೆದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲೆ ಅಧ್ಯಕ್ಷರಾದ ಮಹೇಶ್ ಕಾಮತ್ ಮಾತನಾಡಿ, ಕೃಷ್ಣನ ಜೀವನ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಹಾಗೂ ಮಕ್ಕಳು ಪ್ರತಿ ದಿನ ಕನಿಷ್ಠ ಭಗವದ್ಗೀತೆಯ ಒಂದು ಶ್ಲೋಕವನ್ನಾದರು ಕಲಿಯ ಬೇಕು ಎಂದು ತಿಳಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಭಾವನ, ಡಾ. ವಿಜಯ ರಮೇಶ್, ಡಾ‌. ವಿಜಯ, ಸುರೇಂದ್ರ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ವಿವಿಧ ಪದಾಧಿಕಾರಿಗಳಾದ ಮಧುಶಂಕರ್, ಪುನೀತ್ ಜಿ, ಜಯಶ್ರೀ ಶಿವರಾಂ, ಅರುಣಾಚಲಂ, ಲೋಕೇಶ್, ವಿಜೇಂದ್ರ, ಅನಂತ ಪದ್ಮನಾಭ, ಕುಮುದಾ ಸೇರಿದಂತೆ ಗಣ್ಯರು, ಪೋಷಕರು ಸಾರ್ವಜನಿಕರು ಉಪಸ್ಥಿತರಿದ್ದರು.