ಮೈಸೂರು: ಸರ್ವಜ್ಞ ಜಯಂತಿಯ ಪ್ರಯುಕ್ತ ಕೃಷ್ಣರಾಜ ಠಾಣೆಯ ಪೊಲೀಸ್ ನಿರೀಕ್ಷಕರಾದ ಧನುರಾಜ್ ಡಿ.ಪಿ ಅವರನ್ನು
ಸರ್ವಜ್ಞ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೆ.ಆರ್. ಪೊಲೀಸ್ ಠಾಣೆಯಲ್ಲಿ ಕುಂಬಾರ ಯುವ ಮುಖಂಡರಾದ ಯದುನಂದನ್, ನಾಗರಾಜ್, ಯಶವಂತ, ಮಹಾದೇವಸ್ವಾಮಿ ಮತ್ತು ನಂದೀಶ್, ದಿವಾಕರ್ ಆರಾಧ್ಯ ಸುರೇಶ್ ಅವರುಗಳ ಸಮ್ಮುಖದಲ್ಲಿ ಸರ್ವಜ್ಞ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
