ಬ್ಯಾಂಕ್ ಅಧ್ಯಕ್ಷರಾಗಿ ನೂರು ದಿನ ಪೂರೈಸಿದ ಬಸವರಾಜ ಬಸಪ್ಪ ಅವರಿಗೆ ಅಭಿನಂದನೆ

Spread the love

ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ಕೃಷ್ಣ ರಾಜೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ 100 ದಿನ ಪೂರೈಸಿದ ಬಸವರಾಜು ಬಸಪ್ಪ ಅವರಿಗೆ ಹಲವು ಮುಖಂಡರು ಶುಭ ಕೋರಿದರು.

ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಭಾಸ್ಕರ್,47ನೇ ವಾರ್ಡಿನ ರಾಮಪ್ಪ ರಮೇಶ್, ಮೈಸೂರು ಕಾಂಗ್ರೆಸ್ ಗ್ರಾಮಾಂತರ ಮಾಧ್ಯಮ ವಿಭಾಗ ಸಂಚಾಲಕರಾದ ಜೆಟಿ ಹುಂಡಿ ಸುನಿಲ್, ಶಿವಪ್ರಕಾಶ್, ಪಾಂಡು ರಂಗ ಅವರುಗಳು ಆತ್ಮೀಯವಾಗಿ ಅಭಿನಂದಿಸಿ ಶುಭ ಕೋರಿದರು.

ಬೃಹತ್ ಗಾತ್ರದ ಹಾರ ಹಾಕಿ ಸಿಹಿ ತಿನ್ನಿಸಿ ಶುಭ ಕೋರಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ಅವರು, ಆತ್ಮೀಯ ಸ್ನೇಹಿತ ಬಸವರಾಜ್ ಬಸಪ್ಪನವರು ಬ್ಯಾಂಕಿನ ಅಧ್ಯಕ್ಷರಾಗಿ ನೂರು ದಿನಗಳು ಪೂರೈಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.

ಹಿಂದೆ ಬ್ಯಾಂಕಿನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಬ್ಯಾಂಕಿಗೆ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ, ಈಗ ಅಧ್ಯಕ್ಷರಾಗಿ ಬ್ಯಾಂಕಿನಲ್ಲಿ ಸಿಬ್ಬಂದಿ ವರ್ಗದವರಿಗೆ ಬಯೋಮೆಟ್ರಿಕ್ ನೂತನ ಸೇವೆಯನ್ನು ಪ್ರಾರಂಭಿಸಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಬಸವರಾಜ್ ಬಸಪ್ಪನವರ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿ ಎಂದು ನಜರಬಾದ್ ನಟರಾಜ್ ಮತ್ತಿತರರು ಶುಭ ಹಾರೈಸಿದರು.