ಹುಣಸೂರು: ಹುಣಸೂರಿನ ನಗರಸಭೆ ಜಾಗದಲ್ಲಿ ಯಾರೊ ಖಾಸಗಿ ವ್ಯಕ್ತಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಇತ್ತೀಚೆಗೆ ಮೋರ್ ಸೂಪರ್ ಮಾರ್ಕೆಟ್ ತೆರೆದಿರುವುದರಿಂದ ಸ್ಥಳೀಯ ಸಣ್ಣ,ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.
ಮೋರ್ ಎಂಬ ಸೂಪರ್ ಮಾರ್ಕೆಟ್ ತೆರೆಯಲು ಸಂಬಂಧಪಟ್ಟ ಪ್ರಾಧಿಕಾರದಿಂದ ಲೈಸೆನ್ಸ್ ತೆಗೆದುಕೊಳ್ಳದೆ ಆಕ್ರಮವಾಗಿ ಪ್ರಾರಂಭ ಮಾಡಿದ್ದಾರೆ ಎಂದು ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ) ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.
ಕೇವಲ ಒಂದು ಅರ್ಜಿ ಮುಖಾಂತರ ಅನುಮತಿ ಪಡೆದು ಈ ಸೂಪರ್ ಮಾರ್ಕೆಟ್ ತೆರೆಯಲಾಗಿದೆ,ಇಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದೇ ಅಕ್ರಮ. ವಾಣಿಜ್ಯ ಮಳಿಗೆಯಲ್ಲಿ ಈ ಅಕ್ರಮ ಕಟ್ಟಡಕ್ಕೆ ಸಂಬಂಧಪಟ್ಟಂತೆ ಹುಗಾನೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಈ ಕಟ್ಟಡದ ಲೈಸೆನ್ಸ್ ಈಗಾಗಲೇ ರದ್ದುಪಡಿಸಲಾಗಿದ್ದರೂ ಮಳಿಗೆಯನ್ನು ತೆರೆದು ವ್ಯಾಪಾರ ವಹಿವಾಟು ಪ್ರಾರಂಭಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕಟ್ಟಡದ ತೀರ್ಮಾನವು ಇನ್ನು ಬಾಕಿ ಇದೆ ಆದ್ದರಿಂದ ನ್ಯಾಯಾಲಯದ ಆದೇಶ ಬರುವವರೆಗೂ ಈ ಕಟ್ಟಡದಲ್ಲಿ ಯಾವುದೇ ಮಳಿಗೆಯನ್ನು ತೆರೆಯಲು ಅನುಮತಿ ಕೊಡಬಾರದು ಹಾಗೂ ಮೋರ್ ಸೂಪರ್ ಮಾರ್ಕೆಟ್ ವ್ಯಾಪರವನ್ನು ಸ್ಥಗಿತಗೊಳಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.
ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಈ ಮಳಿಗೆಯನ್ನು ತೆರೆಯಲು ಅನುಮತಿ ಕೊಟ್ಟರುವ ಅಧಿಕಾರಿಗಳ ಮೇಲೆ ಹಾಗೂ ಮೋರ್ ಸೂಪರ್ ಮಾರ್ಕೆಟ್ ರದ್ದುಪಡಿಸಿ ಇದರ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ)ದ ಪರವಾಗಿ ತಾಲೂಕು ಅಧ್ಯಕ್ಷ ಚೆಲುವರಾಜು ಮೈಸೂರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಮೋರ್ ಒಂದು ಮಾಯಾಜಾಲ ಇದ್ದಂತೆ. ಜನರನ್ನು ಮರುಳು ಮಾಡುತ್ತಿದೆ.ಹೊರಗೆ ಬೇರೆ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳು,ದಿನಸಿ, ಮನೆಗೆ ಬೇಕಾದ ಸಾಮಾನುಗಳು ಸಿಗುತ್ತವೆ.ಆದರೆ ಮೋರ್ ನಲ್ಲಿ ಎಲ್ಲವೂ ದುಬಾರಿ.ಈ ಸೂಪರ್ ಮಾರ್ಕೆಟ್ ಇಲ್ಲೇ ಮುಂದುವರಿದರೆ ಗ್ರಾಮೀಣ ಭಾಗದ ಬಡ ರೈತರು ವ್ಯಾಪಾರಗಾರರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.
ತಕ್ಷಣ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿಗಳು ಎಚ್ಚತ್ತುಕೊಂಡು ಮೋರ್ ಸೂಪರ್ ಮಾರ್ಕೆಟ್ ಓಡಿಸಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.
