ಕೆಪಿಪಿ ರೈತ ಪರ್ವ ಮಹಿಳಾ ಘಟಕದ‌ ಅಧ್ಯಕ್ಷರಾಗಿ ಮಂಜುಳಾ ನೇಮಕ

Spread the love

ಹುಣಸೂರು: ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಮಹಿಳಾ ಘಟಕದ ಅಧ್ಯಕ್ಷರಾಗಿ ಮಂಜುಳಾ ಅವರನ್ನು ನೇಮಕ ಮಾಡಲಾಗಿದೆ.

ಹುಣಸೂರು ತಾಲೂಕು ಹೊನ್ನಿ ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪುಣ್ಯತಿಥಿ ಹಮ್ಮಿಕೊಂಡಿದ್ದ ವೇಳೆ ಮಂಜುಳಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಹಕ್ಕುಪತ್ರವನ್ನು ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ತಾಲೂಕು ಅಧ್ಯಕ್ಷ
ಚೆಲುವರಾಜು ಹಾಗೂ ಇತರ ಪದಾಧಿಕಾರಿಗಳು ಮತ್ತು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಶಿವಣ್ಣ ಅವರು ಮಂಜುಳಾ ಅವರಿಗೆ ಹಕ್ಕುಪತ್ರ ನೀಡಿ ಶುಭ ಹಾರೈಸಿದರು.

ಮುಂದಿನ ದಿನಗಳಲ್ಲಿ ಪಕ್ಷವನ್ನು ಬುಡಮಟ್ಟದಿಂದ ಬಲಗೊಳಿಸಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸದಸ್ಯರನ್ನಾಗಿ ಮಾಡಲು ಶ್ರಮಿಸುವಂತೆ ಮೈಸೂರಿನವರಾದ ಮಂಜುಳಾ ಅವರಿಗೆ ಸಲಹೆ ನೀಡಲಾಯಿತು.