(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪಟ್ಟಣದ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಂಡರು.
ಜಿ.ಪಂ ಚಾ.ನಗರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೊಳ್ಳೇಗಾಲ ಹಾಗೂ ಸರ್ಕಾರಿ ಪ್ರೌಢಶಾಲೆ ಹೊಸ ಮಾಲಂಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕ್ರೀಡಾಕೂಟಕ್ಕೆ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಹೇಳಿದರು.

ಬಾಲಕಿಯರ ವಿಭಾಗ:
ಗುಂಡು ಎಸೆತ: ಪ್ರಥಮ ಬಹುಮಾನ ಪ್ರಕಾಶ್ ಪಾಳ್ಯದ ಡಾನ್ ಬಾಸ್ಕೋ ಶಾಲೆಯ ನಿತ್ಯದರ್ಶಿನಿ, ದ್ವಿತೀಯ ಬಹುಮಾನ ಪಾಸ್ಕಲ್ ನಗರದ ನಿಶಾ.ಜೆ,
ತೃತೀಯ ಬಹುಮಾನ ಹೊಸಮಾಲಂಗಿ ಸರ್ಕಾರಿ ಪ್ರೌಢಶಾಲೆಯ ಮಮತಾ.
ಚಕ್ರ ಎಸೆತ: ಪ್ರಥಮ ಬಹುಮಾನ ಹೊಸಮಾಲಂಗಿ ಸರ್ಕಾರಿ ಪ್ರೌಢಶಾಲೆಯ ಮಮತಾ, ದ್ವಿತೀಯ ಬಹುಮಾನ ಸಿಂಗನಲ್ಲೂರು ಸರ್ಕಾರಿ ಪ್ರೌಢಶಾಲೆಯ ಕುಸುಮ ಎಸ್,
ತೃತೀಯ ಬಹುಮಾನ ಪಟ್ಟಣದ ಲಯನ್ಸ್ ಶಾಲೆಯ ನೂರ್ ಅಪ್ಸ,
ಜಾವಲಿನ್ ಎಸೆತ: ಪ್ರಥಮ ಬಹುಮಾನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿಯಾಂಕ, ದ್ವಿತೀಯ ಬಹುಮಾನ ಪಟ್ಟಣದ ಅಸಿಸಿ ಶಾಲೆಯ ಕವಿತಾ, ತೃತೀಯ ಬಹುಮಾನ ಫಾಸ್ಕಲ್ ನಗರದ ರೂಥ್ ಅನೂಪ.
ಎತ್ತರ ಜಿಗಿತ: ಪ್ರಥಮ ಬಹುಮಾನ ಪಟ್ಟಣದ ಬಿ ಎಂ ಹೆಚ್ ಶಾಲೆಯ ದೀಪಾ ಎಂ.,ದ್ವಿತೀಯ ಪಟ್ಟಣದ ಎಸ್ ವಿ ಕೆ ಶಾಲೆಯ ಭವ್ಯ ಎಸ್.,ತೃತೀಯ ಪಾಳ್ಯದ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸಿನಿ.
ಉದ್ದ ಜಿಗಿತ: ಪ್ರಥಮ ಬಹುಮಾನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪೃಥ್ವಿನಿ,
ದ್ವಿತೀಯ ಬಹುಮಾನ ಪಟ್ಟಣದ ಲಯನ್ಸ್ ಶಾಲೆಯ ನೂರ್ ಅಪ್ಸ, ತೃತೀಯ ಬಹುಮಾನ ಸಿಂಗನಲ್ಲೂರು ನಿಸರ್ಗ ಶಾಲೆಯ ರೋಜಾ.
ತ್ರಿವಿಧ ಜಿಗಿತ: ಪ್ರಥಮ ಬಹುಮಾನ ಪಟ್ಟಣದ ಬಿ ಎಂ ಎಚ್ ಕೆ ಶಾಲೆಯ ದೀಪಾ ಎಂ.,ದ್ವಿತೀಯ ಬಹುಮಾನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪೃಥ್ವಿನಿ,
ವೈಯಕ್ತಿಕ ಚಾಂಪಿಯನ್ ಶಿಫ್: ಪ್ರಥಮ ಬಹುಮಾನ ಕೊತ್ತನೂರಿನ ಜಿ.ವಿ. ಗೌಡ ಪ್ರೌಢಶಾಲೆಯ ಚಂದ್ರಮ್ಮ.
ಬಾಲಕರ ವಿಭಾಗ-
ಗುಂಡು ಎಸೆತ: ಪ್ರಥಮ ಬಹುಮಾನ ಪಟ್ಟಣದ ಶಿವ ವಿದ್ಯಾಕೇಂದ್ರದ ಪುನೀತ್, ದ್ವಿತೀಯ ಬಹುಮಾನ ಭವನ್ಸ್ ಗೀತಾ ಶಾಲೆಯ ಪುರುಷೋತ್ತಮ್ .ಪಿ, ತೃತೀಯ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಇಂದ್ರೇಶ್.ಎಲ್,
ಚಕ್ರ ಎಸೆತ: ಪ್ರಥಮ ಬಹುಮಾನ ಆದರ್ಶ ಶಾಲೆಯ ಸಂಜಯ್.ಎನ್, ದ್ವಿತೀಯ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಸಿದ್ದು, ತೃತೀಯ ಬಹುಮಾನ ಬಿ.ಎಂ.ಹೆಚ್.ಎಸ್. ಶಾಲೆಯ ಸುಪ್ರೀತ್.
ಜಾವಲಿನ್ ಎಸೆತ: ಪ್ರಥಮ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಸಿದ್ದು, ದ್ವಿತೀಯ ಬಹುಮಾನ ಸೂರಪುರ ಸರ್ಕಾರಿ ಪ್ರೌಢಶಾಲೆಯ ಮಾದೇಶ್.ಎನ್, ತೃತೀಯ ಬಹುಮಾನ ಕೊತ್ತನೂರು ಜಿ.ವಿ ಗೌಡ ಪ್ರೌಢಶಾಲೆಯ ದೀಪಕ್ ಕುಮಾರ್.
ಎತ್ತರ ಜಿಗಿತ: ಪ್ರಥಮ ಬಹುಮಾನ ಪಟ್ಟಣದ ಶಿವ ವಿದ್ಯಾ ಕೇಂದ್ರದ ಪುನೀತ್.ಎಂ, ದ್ವಿತೀಯ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಆಕಾಶ್, ತೃತೀಯ ಬಹುಮಾನ ಪಾಳ್ಯದ ಇಂದಿರಾ ಗಾಂಧಿ ವಸತಿ ಶಾಲೆಯ ದರ್ಶಿತ್.
ಉದ್ದ ಜಿಗಿತ: ಪ್ರಥಮ ಬಹುಮಾನ ಕೊತ್ತನೂರು ಜಿ.ವಿ ಗೌಡ ಪ್ರೌಢಶಾಲೆಯ ಸುಂದರ್, ದ್ವಿತೀಯ ಬಹುಮಾನ ಪಟ್ಟಣದ ಲಯನ್ಸ್ ಶಾಲೆಯ ವಿಜೇತ್. ಡಿ, ತೃತೀಯ ಬಹುಮಾನ ಆದರ್ಶ ಶಾಲೆಯ ಸುಭಾಷ್.ಎಸ್.
ತ್ರಿವಿಧ ಜಿಗಿತ: ಪ್ರಥಮ ಬಹುಮಾನ ಆದರ್ಶ ಶಾಲೆಯ ಸುಭಾಷ್.ಎಸ್, ದ್ವಿತೀಯ ಬಹುಮಾನ ಭವನ್ಸ್ ಗೀತಾ ಶಾಲೆಯ ಚಿರಂತ್.ಎಂ, ತೃತೀಯ ಬಹುಮಾನ ಕೊತ್ತನೂರು ಜಿ.ವಿ ಗೌಡ ಪ್ರೌಢಶಾಲೆಯ ಸುಂದರ್, ವೈಯಕ್ತಿಕ ಚಾಂಪಿಯನ್ ಶಿಫ್: ಪ್ರಥಮ ಬಹುಮಾನ ಹರೀಶ್.
ಬಾಲಕಿಯರ ವಿಭಾಗ ಓಟದ ಸ್ಪರ್ಧೆಗಳು:
100 ಮೀಟರ್: ಪ್ರಥಮ ಬಹುಮಾನ ಆದರ್ಶ ಶಾಲೆಯ ವೈಷ್ಣವಿ ಶಂಕರ್, ದ್ವಿತೀಯ ಬಹುಮಾನ ವಾಸವಿ ಶಾಲೆಯ ಪ್ರಾರ್ಥನಾ, ತೃತೀಯ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಅಮೃತ.
200 ಮೀಟರ್: ಪ್ರಥಮ ಬಹುಮಾನ ಆದರ್ಶ ಶಾಲೆಯ ವೈಷ್ಣವಿ ಶಂಕರ್, ದ್ವಿತೀಯ ಬಹುಮಾನ ವಾಸವಿ ಶಾಲೆಯ ಪ್ರಾರ್ಥನಾ, ತೃತೀಯ ಬಹುಮಾನ ಪಾಳ್ಯದ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸಿನಿ
ಎಂ.ಎಸ್.
400 ಮೀಟರ್: ಪ್ರಥಮ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಜಿನೀಬಾ ಆಸ್ಕಲಿನ್, ದ್ವಿತೀಯ ಬಹುಮಾನ ಎಸ್.ವಿ.ಕೆ ಶಾಲೆಯ ದಿವ್ಯಶ್ರೀ. ಎಸ್, ತೃತೀಯ ಬಹುಮಾನ ಸಿಂಗನಲ್ಲೂರು ನಿಸರ್ಗ ಶಾಲೆಯ ಹರ್ಷಿತಾ.ಕೆ,
800 ಮೀಟರ್: ಪ್ರಥಮ ಬಹುಮಾನ ಕೊತ್ತನೂರು ಜಿ.ವಿ ಗೌಡ ಪ್ರೌಢಶಾಲೆಯ ಚಂದ್ರಮ್ಮ ದ್ವಿತೀಯ ಬಹುಮಾನ ಭವನ್ಸ್ ಗೀತಾ ಶಾಲೆಯ ಹರ್ಷಿತ ಎಂ ತೃತೀಯ ಬಹುಮಾನ ಬಸವಲಿಂಗಪ್ಪ ಶಾಲೆಯ ದಿವ್ಯಾಶ್ರೀ.
1500 ಮೀಟರ್: ಪ್ರಥಮ ಬಹುಮಾನ ಕೊತ್ತನೂರು ಜಿ.ವಿ ಗೌಡ ಪ್ರೌಢಶಾಲೆಯ ಚಂದ್ರಮ್ಮ ದ್ವಿತೀಯ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ವರ್ಷಾ, ತೃತೀಯ ಬಹುಮಾನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರತೀಕ್ಷಾ.
3000 ಮೀಟರ್: ಪ್ರಥಮ ಬಹುಮಾನ ಕೊತ್ತನೂರು ಜಿ.ವಿ ಗೌಡ ಪ್ರೌಢಶಾಲೆಯ ಚಂದ್ರಮ್ಮ ದ್ವಿತೀಯ ಬಹುಮಾನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಇಂಚನ
ತೃತೀಯ ಬಹುಮಾನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪೃಥ್ವಿನಿ.
4×100 ರಿಲೇ: ಪ್ರಥಮ ಬಹುಮಾನ ಪ್ರಾರ್ಥನ ಮತ್ತು ತಂಡ ವಾಸವಿ ಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ಜಸ್ಮಿತಾ ಮತ್ತು ತಂಡ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಿಮ್ಮರಾಜಿಪುರ
4×400 ರಿಲೇ: ಪ್ರಥಮ ಬಹುಮಾನ ಶ್ರಾವಂತಿ ಮತ್ತು ತಂಡ ಬಿ.ಎಂ.ಹೆಚ್.ಎಸ್ ಕೊಳ್ಳೇಗಾಲ, ದ್ವಿತೀಯ ಬಹುಮಾನ ಜಸ್ಮಿತಾ ಮತ್ತು ತಂಡ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಿಮ್ಮರಾಜಿಪುರ.
ಬಾಲಕರ ವಿಭಾಗ ಓಟದ ಸ್ಪರ್ಧೆಗಳು:
100 ಮೀಟರ್: ಪ್ರಥಮ ಬಹುಮಾನ ವಾಸವಿ ಶಾಲೆಯ ಮಹಮ್ಮದ್ ರೆಹಾನ್,
ದ್ವಿತೀಯ ಬಹುಮಾನ ಆದರ್ಶ ಶಾಲೆಯ ಸುಭಾಷ್, ತೃತೀಯ ಬಹುಮಾನ ಸತ್ತೇಗಾಲ ಜಿ.ಹೆಚ್.ಎಸ್ ನ ಮನೋಜ್
200 ಮೀಟರ್: ಪ್ರಥಮ ಬಹುಮಾನ ವಾಸವಿ ಶಾಲೆಯ ಮಹಮ್ಮದ್ ರೆಹಾನ್,
ದ್ವಿತೀಯ ಬಹುಮಾನ ಕಾಮಗೆರೆಯ ಕ್ಲೇವಿಯರ್ ಶಾಲೆಯ ಧನುಷ್, ತೃತೀಯ ಬಹುಮಾನ ಸತ್ತೇಗಾಲ ಜಿ.ಹೆಚ್.ಎಸ್ ನ ಮನೋಜ್.
400 ಮೀಟರ್: ಪ್ರಥಮ ಬಹುಮಾನ ಎಂ.ಸಿ.ಕೆ.ಸಿ ಶಾಲೆಯ ಗಂಗಾಧರ್, ದ್ವಿತೀಯ ಬಹುಮಾನ ನಿಸರ್ಗ ಶಾಲೆಯ ಸಂಜಯ್,
800 ಮೀಟರ್: ಪ್ರಥಮ ಬಹುಮಾನ ಕಾಮಗೆರೆ ಜೆ.ಎಸ್.ಎಸ್ ಶಾಲೆಯ ಹರೀಶ್.ವಿ.ದ್ವಿತೀಯ ಬಹುಮಾನ ಶ್ರೇಯಸ್.ಬಿ, ತೃತೀಯ ಬಹುಮಾನ ವಾಸವಿ ಶಾಲೆಯ ಅಹ್ಮದ್ ಖಾನ್.
1500 ಮೀಟರ್: ಪ್ರಥಮ ಬಹುಮಾನ ಕಾಮಗೆರೆ ಜೆ.ಎಸ್.ಎಸ್ ಶಾಲೆಯ ಹರೀಶ್.ವಿ, ದ್ವಿತೀಯ ಬಹುಮಾನ ವಾಸವಿ ಶಾಲೆಯ ಅಹ್ಮದ್ ಖಾನ್,
ತೃತೀಯ ಬಹುಮಾನ ಡಾನ್ ಬೋಸ್ಕೊ ಶಾಲೆಯ ಕಿಶೋರ್ ಕುಮಾರ್.
3000 ಮೀಟರ್: ಪ್ರಥಮ ಬಹುಮಾನ ಕಾಮಗೆರೆ ಜೆ.ಎಸ್.ಎಸ್ ಶಾಲೆಯ ಸೂರಪುರ ಜಿ.ಹೆಚ್.ಎಸ್ ನ ಹರೀಶ್.ವಿ,
ದ್ವಿತೀಯ ಬಹುಮಾನ ಹಿತೇಶ್ ರಾಜ್,
ತೃತೀಯ ಬಹುಮಾನ ಬಸವಲಿಂಗಪ್ಪ ಶಾಲೆಯ ಸದಾಶಿವ.
4×100 ರಿಲೇ: ಪ್ರಥಮ ಬಹುಮಾನ ಮಹಮ್ಮದ್ ರೆಹಾನ್ ಮತ್ತು ತಂಡ ವಾಸವಿ ಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ಸುಭಾಷ್ ಮತ್ತು ತಂಡ ಆದರ್ಶ ಶಾಲೆ ಕೊಳ್ಳೇಗಾಲ
4×400 ರಿಲೇ: ಪ್ರಥಮ ಬಹುಮಾನ ಅಹಮದ್ ಮತ್ತು ತಂಡ ವಾಸವಿ ಶಾಲೆ ಕೊಳ್ಳೇಗಾಲ ದ್ವಿತೀಯ ಬಹುಮಾನ ಆಕಾಶ್ ಮತ್ತು ತಂಡ ಸೆಂಟ್ ಜೇವಿಯರ್
ಬಾಲಕರ ವಿಭಾಗ:
ಖೋ ಖೋ: ಪ್ರಥಮ ಬಹುಮಾನ ಮಹದೇಶ್ವರ ಪ್ರೌಢಶಾಲೆ ಕಾಮಗೆರೆ, ದ್ವಿತೀಯ ಬಹುಮಾನ ಎಂ ಸಿ ಕೆ ಸಿ ಪ್ರೌಢಶಾಲೆ ಕೊಳ್ಳೇಗಾಲ
ಕಬಡ್ಡಿ: ಪ್ರಥಮ ಬಹುಮಾನ ವಾಸವಿ ಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ಸರ್ಕಾರಿ ಪ್ರೌಢಶಾಲೆ ಮಧುವನಹಳ್ಳಿ
ವಾಲಿಬಾಲ್: ಪ್ರಥಮ ಬಹುಮಾನ ಗ್ರಾಮಾಂತರ ಪ್ರೌಢಶಾಲೆ ಪಾಳ್ಯ, ದ್ವಿತೀಯ ಬಹುಮಾನ ಲಯನ್ಸ್ ಶಾಲೆ ಕೊಳ್ಳೇಗಾಲ
ಥ್ರೋ ಬಾಲ್: ಪ್ರಥಮ ಬಹುಮಾನ ಅಸಿಸಿ ಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ನಿಸರ್ಗ ಶಾಲೆ ಸಿಂಗನಲ್ಲೂರು,
ಬ್ಯಾಡ್ಮಿಂಟನ್: ಪ್ರಥಮ ಬಹುಮಾನ ಬಿ ಎಂ ಹೆಚ್ ಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ಲಯನ್ಸ್ ಶಾಲೆ ಕೊಳ್ಳೇಗಾಲ
ಬಾಲಕಿಯರ ವಿಭಾಗ:
ಖೋ ಖೋ: ಪ್ರಥಮ ಬಹುಮಾನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಿಮ್ಮರಾಜಿಪುರ,
ದ್ವಿತೀಯ ಬಹುಮಾನ ಸರ್ಕಾರಿ ಪ್ರೌಢಶಾಲೆ ಸತ್ತೇಗಾಲ
ಕಬಡ್ಡಿ: ಪ್ರಥಮ ಬಹುಮಾನ ವಾಸವಿ ಪ್ರೌಢಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ಇಂದಿರಾ ಗಾಂಧಿ ವಸತಿ ಶಾಲೆ ಪಾಳ್ಯ
ವಾಲಿಬಾಲ್: ಪ್ರಥಮ ಬಹುಮಾನ ಬಿ ಎಂ ಹೆಚ್ ಶಾಲೆ ಕೊಳ್ಳೇಗಾಲ, ದ್ವಿತೀಯ ಬಹುಮಾನ ಜಿ.ವಿ ಗೌಡ ಪ್ರೌಢಶಾಲೆ ಕೊತ್ತನೂರು
ಥ್ರೋ ಬಾಲ್: ಪ್ರಥಮ ಬಹುಮಾನ ಸರ್ಕಾರಿ ಪ್ರೌಢಶಾಲೆ ಸಿಂಗನಲ್ಲೂರು,
ದ್ವಿತೀಯ ಬಹುಮಾನ ಎಸ್.ವಿ.ಕೆ ಪ್ರೌಢಶಾಲೆ ಕೊಳ್ಳೇಗಾಲರವರು ಪಡೆದು ಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ನವೆಂಬರ್ ತಿಂಗಳು ನಿವೃತ್ತಿ ಹೊಂದುವ ದೈಹಿಕ ಪರಿವೀಕ್ಷಕರಾದ ಸ್ಟೀವನ್ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡೆಯಲ್ಲಿ ಪ್ರಶಸ್ತಿ ಗಳಿಸಿದ್ದ ತೆಳ್ಳನೂರು ಶಾಲೆಯ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟ ಸಮಾರಂಭದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಲೆಕ್ಸಾಂಡರ್,
ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ವಿಶ್ವನಾಥ್, ಹೊಸಮಾಲಂಗಿ,ಪ್ರೌಢಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದರಾಜು, ಮುಖ್ಯ ಶಿಕ್ಷಕಿ ವಸಂತಮೇರಿ ಮತ್ತಿತರರು ಹಾಜರಿದ್ದರು.
