(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರನ್ನು ರಾಜ್ಯ ಸರ್ಕಾರ ಧಿಡೀರ್ ವರ್ಗವಣೆ ಮಾಡಿ ತೆರವಾದ ಸ್ಥಳಕ್ಕೆ ದಿನೇಶ್ ಕುಮಾರ್ ಮೀನ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್ ಅವರು ದಿನೇಶ್ ಕುಮಾರ್ ಮೀನ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜಸ್ಥಾನ ಮೂಲದ ದಿನೇಶ್ ಕುಮಾರ್ ಮೀನ ಅವರು 2023 ನೇ ಬ್ಯಾಚ್‌ನ ಐ.ಎ.ಎಸ್ ಅಧಿಕಾರಿಯಾಗಿದ್ದು ಬೆಳಗಾವಿ ಹಾಗೂ ದೆಹಲಿಯಲ್ಲಿ ತರಬೇತಿ ಹಾಗೂ ಪ್ರೊಬೆಷನರಿ ಅವಧಿ ಮುಗಿಸಿ ಕೊಳ್ಳೇಗಾಲ ನೂತನ ಉಪವಿಭಾಗಾಧಿಕಾರಿಯಾಗಿದ್ದಾರೆ.
ದಿನೇಶ್ ಕುಮಾರ್ ಮೀನ ಅವರು
ನಿರ್ಗಮಿತ ಎಸಿ ಮಹೇಶ್ ಅವರಿಂದ ಅಧಿಕಾರ ವಹಿಸಿಕೊಂಡರು. ಬಿ.ಆರ್.ಮಹೇಶ್ ಅವರಿಗೆ ಸರ್ಕಾರ ಯಾವುದೇ ಸ್ಥಳ ತೋರಿಸಿಲ್ಲ.
2020 ರ ಬ್ಯಾಚ್ ನ ಕೆ.ಎ.ಎಸ್ ಅಧಿಕಾರಿಯಾಗಿರುವ ಬಿ. ಆರ್. ಮಹೇಶ್ ರವರು ಕೊಳ್ಳೇಗಾಲ ಉಪ ವಿಭಾಗದಲ್ಲಿ ಪ್ರೊಭೇಶನರಿ ಅವಧಿ ಮುಗಿಸಿ ಒಂದು ವರ್ಷ ಕೊಳ್ಳೇಗಾಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇಲ್ಲಿಂದಲೇ ತಮ್ಮ ಸಾರ್ವಜನಿಕ ಸೇವೆ ಪ್ರಾರಂಭಿಸಿದ್ದರು.
ನಂತರ 2023 ರಲ್ಲಿ ಕಂದಾಯ ಇಲಾಖೆ ಸೇರಿ ಕಳೆದ 2 ವರ್ಷದಿಂದ ಕೊಳ್ಳೇಗಾಲ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅವರು ತಮ್ಮ ಸೇವಾ ಅವಧಿಯಲ್ಲಿ ಸಾರ್ವಜನಿಕರೊಡನೆ ಹೊಂದಿದ್ದ ಉತ್ತಮ ಬಾಂಧವ್ಯ, ಸ್ಪಂದನೆ ಹಾಗೂ ಕರ್ತವ್ಯದಲ್ಲಿ ತೋರಿದ ಉತ್ಸುಕತೆಯಿಂದ ಅತ್ಯುತ್ತಮ ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ 2024 ನೇ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಿ. ಆರ್. ಮಹೇಶ್ ರವರು ಭಾಜನರಾಗಿದ್ದರು. ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರಿಂದ ರಾಜ್ಯ ಪಾಲರಿಂದ ಪ್ರಶಂಸನಿಯರಾಗಿದ್ದರು.
2 ವರ್ಷ 1 ತಿಂಗಳು ಕೊಳ್ಳೇಗಾಲ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವರನ್ನು ಸರ್ಕಾರ ಧಿಡೀರ್ ವರ್ಗವಣೆ ಮಾಡಿಬಿಟ್ಟಿದೆ.
