ಕೊಳ್ಳೇಗಾಲ: ಪ್ರತಿಯೊಬ್ಬ ಮಕ್ಕಳು ಉತ್ತಮವಾಗಿ ಓದಿ ಮುಂದೆ ಬಂದು ತಾಂದೆ,ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ಮಂಜೇಗೌಡ ತಿಳಿಹೇಳಿದರು.
ಕೊಳ್ಳೇಗಾಲದ ಒಕ್ಕಲಿಗರ ಜಿ ವಿ ಗೌಡರ ಸ್ಮಾರಕ ಶಾಲಾ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಂದೆ,ತಾಯಿ ನಿಮ್ಮನ್ನು ಓದಿಸಲು ಬಹಳ ಕಷ್ಟಪಟ್ಟಿರುತ್ತಾರೆ,ಹಾಗಾಗಿ ಅವರ ಕನಸುಗಳನ್ನು ನನಸು ಮಾಡಬೇಕು, ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬರಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಪ್ರಸ್ತುತ ಸನ್ನಿವೇಶದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಮಾಜಿ ಶಾಸಕರಾದ ನರೇಂದ್ರ ಅವರು ಬಹಳ ಕಡಿಮೆ ಫೀಸು ತೆಗೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಅದರ ಸದುಪಯೋಗವಾಗಲಿ ಎಂದು ಮಂಜೇಗೌಡ ಹೇಳಿದರು.
ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಹನೂರಿನ ಮಾಜಿ ಶಾಸಕರಾದ ಆರ್ ನರೇಂದ್ರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸೇರಿದಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.