ಗ್ಯಾರಂಟಿ ಯೋಜನೆಗಳಿಗೆ ಸಂಬಂಧ ಪಟ್ಟ ಮಾಹಿತಿ ಪಡೆದ ರಾಜೇಂದ್ರ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕು ಗ್ಯಾರೆಂಟಿ ಯೋಜನೆಗಳ ಜುಲೈ ಮಾಹೆಯ ಪುನರಾವರ್ತಿತ ಸಭೆ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾ. ಅಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಪ್ರಸಕ್ತ ಮಾಹೆಯ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಒಟ್ಟು 48665 ಪಡಿತರ ಕುಟುಂಬಗಳಿದ್ದು 153830 ಸದಸ್ಯರಿದ್ದಾರೆ, 80 ನ್ಯಾಯಬೆಲೆ ಅಂಗಡಿಗಳಿವೆ, 4272.29 ಕ್ವಿಂಟಲ್ ಅಕ್ಕಿ 53 9.21 ಕ್ವಿಂಟಲ್ ರಾಗಿ ಹಾಗೂ ಅನ್ನಭಾಗ್ಯ ಯೋಜನೆ ಅಡಿ 7133.45 ಕ್ವಿಂಟಲ್ ರಾಗಿ ಸೇರಿದಂತೆ ಒಟ್ಟು 16795,95 ಕ್ವಿಂಟಲ್ ಪಡಿತರವನ್ನು ವಿತರಿಸಲಾಗಿದೆ.

ಹೊಸ ಪಡಿತರ ಚೀಟಿ ಗಾಗಿ ಆನ್ಲೈನ್ ಮೂಲಕ 2227 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ ಹದಿ ಮೂರು ಹನ್ನೆರಡು ಪಡಿಸರ ಚೀಟಿಗಳನ್ನು ನೀಡಲಾಗಿದೆ 350 ಅರ್ಜಿಗಳನ್ನು ರದ್ದುಪಡಿಸಲಾಗಿದ್ದು 560 ಅರ್ಜಿಗಳು ಬಾಕಿ ಇವೆ. ಎಂದು ಆಹಾರ ಇಲಾಖೆ ಶಿರಸ್ತೇದಾರಾದ ವಿಶ್ವನಾಥ್ ರವರು ಸಭೆಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆ ಕುರಿತು ಮಾಹಿತಿ ನೀಡಿದ ಸಿ ಡಿ ಪಿ ಒ ಅಂಬಿಕಾ ಅವರು ಈ ಯೋಜನೆ ಅಡಿ ಒಟ್ಟು 47146 ಫಲಾನುಭವಿಗಳಿದ್ದು 45617 ಮಂದಿ ಹಣ ಸ್ವೀಕರಿಸಿರುತ್ತಾರೆ. ಬಾಕಿ ಇಂದಿನ ಸಭೆಯಲ್ಲಿ ತಿಳಿಸಿರುವಂತೆ 41 ಜನ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಸೀಡಿಂಗ್ ಮಾಡಿಸಿರುತ್ತಾರೆ ಯಾವುದೇ ಬಾಕಿ ಇರುವುದಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಲಾಗಿನ್ ನಲ್ಲಿ ಎಲ್ಲಾ ಅರ್ಜಿಗಳನ್ನು ಅಪ್ರುವಲ್ ಮಾಡಲಾಗಿರುತ್ತದೆ. ಜಿ.ಎಸ್. ಟಿ 75, ಮತ್ತು 218 ಮರಣ ಹೊಂದಿದ ಫಲಾನುಭವಿಗಳ ಡಿಲೀಟ್ ಮಾಡಲು ಸಿಡಿಪಿಒ ಲಾಗಿನ್ ನಿಂದ ಅಪ್ರೋವಲ್ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಿ ಬದಲಾಯಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆಗೆ 46363 ಗ್ರಾಹಕರು ಒಳಪಟ್ಟಿದ್ದು. ಒಟ್ಟು 46 111 (ಶೇ 99.46) ಗ್ರಾಹಕರು ನೋಂದಣಿಯಾಗಿದೆ, 252 (ಶೇ 46) ರಷ್ಟು ಪ್ರಗತಿಯಲ್ಲಿದೆ. ಮೇ ತಿಂಗಳ ವರೆಗೆ 46045 ಗ್ರಾಹಕರ 1,92,860 33.66 ರು ಹಣ ಬಿಡುಗಡೆಯಾಗಿದೆ ಜೂನ್ ತಿಂಗಳ 46111 ಗ್ರಾಹಕರ ಅನುದಾನ 1, 98,87088,66 ರೂ. ಅನುದಾನ ಬಾಕಿ ಇದೆ ಎಂದು ಬೆಸ್ಕಾಂ ಎಇಇ ರಾಜು ಹೇಳಿದರು.

ಶಕ್ತಿ ಯೋಜನೆಯಡಿ ಜೂನ್ ತಿಂಗಳಲ್ಲಿ 1208669 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 59573862 ರೂಗಳು ಸಂಗ್ರಹವಾಗಿದೆ 2023 ಜೂನ್ ನಿಂದ 2025 ಜೂನ್ ವರೆಗೆ 27609142 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 1235585300 ಆದಾಯ ಬಂದಿದೆ ಎಂದು ಕೊಳ್ಳೇಗಾಲ ಘಟಕ ವ್ಯವಸ್ಥಾಪಕ ಭೋಗ ನಾಯಕ ಮಾಹಿತಿ ನೀಡಿದರು.

ಯುವನಿಧಿ ಯೋಜನೆ ಅಡಿ 24.7.2024 ಕ್ಕೆ 702 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ 12.1.2024 ರಿಂದ ಫಲಾನುಭವಿಗಳ ಖಾತೆಗೆ ಕೇಂದ್ರ ಕಚೇರಿಯಿಂದ ನೇರ ನಗದು ವರ್ಗಾವಣೆ ಆಗಿದೆ, ಮೇ ತಿಂಗಳವರೆಗೆ 13500 ಫಲಾನುಭವಿಗಳು 1734000 ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಯಾಗಿದ್ದು ಫೆ.2024 ರಿಂದ ಮೇ 2025ರ ವರೆಗೆ 75,000 ಫಲಾನುಭವಿಗಳಿಗೆ 13044000 ರೂ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಉದ್ಯೋಗ ವಿನಿಮಯ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಕುಂತೂರು ಮೋಳೆ ರಾಜೇಂದ್ರ ಅವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾಗಿದ್ದು ಇದು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೊನ್ಮುಖರಾಗುವಂತೆ ಕರೆ ನೀಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾ.ಪಂ. ಇ.ಒ ಗುರು ಶಾಂತಪ್ಪ ಬೆಳ್ಳುಂಡಗಿ, ಸದಸ್ಯರಾದ ರಾಜುಗೌಡ, ಶಿವಕುಮಾರ, ಶಾಂತರಾಜು, ನಿಂಗರಾಜು, ಪರಮೇಶ್, ನಾರಾಯಣ, ಬಾಬು, ಪರಶಿವ, ನಾಗವೇಣಿ ಹಾಗೂ ಶ್ರೀನಿವಾಸಮೂರ್ತಿ ಹಾಜರಿದ್ದರು.