ಕೊಳ್ಳೇಗಾಲ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದವನನ್ನು ಯಳಂದೂರು ಸಿಪಿಐ ನೇತೃತ್ವದ ತಂಡ ಕುಣಗಳ್ಳಿ ಕೆರೆ ಏರಿ ಬಳಿ ಬಂಧಿಸಿದೆ.
ಕೊಳ್ಳೇಗಾಲ ಪಟ್ಟಣದ ನೂರ್ ಮೊಹಲ್ಲಾದ ಫೈಜಾನ್ ಪಾಷ ಬಂಧಿತ ಆರೋಪಿ.
ಈತ ಒಣ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತಾ ಅವರ ಮಾರ್ಗದರ್ಶನದಲ್ಲಿ ಯಳಂದೂರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಮಾಂಬಳ್ಳಿ ಠಾಣೆ ಪಿಎಸ್ಐ ಕರಿಬಸಪ್ಪ ಹಾಗೂ ಸಿಬ್ಬಂದಿ ಗಾಳಿ ನಡೆಸಿದರು.
ಕುಣಗಳ್ಳಿ ಕೆರೆ ಏರಿ ಬಳಿ ಆರೋಪಿಯನ್ನು ಬಂಧಿಸಿ ಮಾರಾಟ ಮಾಡಲು ಸಾಯಿಸುತ್ತಿದ್ದ 108 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ದಾಳಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಸಿದ್ದರಾಜು, ಸುಕ್ರನಾಯಕ್, ಬಸವರಾಜು ಗುತ್ತಲ್, ಶಿವಕುಮಾರ್ ಹಾಗೂ ಮಲ್ಲೇಶ್ ಭಾಗವಹಿಸಿದ್ದರು.