ಕೊಳ್ಳೇಗಾಲ: ಮಾರಾಟ ಮಾಡಲು ಒಣ ಗಾಂಜಾ ಬೈಕಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಅರೇಪಾಳ್ಯ ಗ್ರಾಮದ ವಿನ್ಸೆಂಟ್ (35) ಹಾಗೂ ಜಕ್ಕಳ್ಳಿ ಗ್ರಾಮದ ಜಾನ್ ಬ್ರಿಟೋ(33) ಬಂಧಿತ ಆರೋಪಿಗಳು.
ಆರೋಪಿಗಳು ರಾತ್ರಿ 10 ಗಂಟೆ ವೇಳೆ ಜಕ್ಕಳ್ಳಿ ಗ್ರಾಮದಿಂದ ಕೊಳ್ಳೇಗಾಲ ಪಟ್ಟಣದ ಕಡೆಗೆ ಒಣಗಾಂಜಾ ಮಾರಾಟ ಮಾಡುವ ಸಲುವಾಗಿ KA-10-EG-2177 ಹಿರೋ ಸ್ಪ್ಲೆಂಡರ್ ಬೈಕಿನಲ್ಲಿ ಲಿಂಗಣಾಪುರ ಮಾರ್ಗವಾಗಿ ಬರುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧಾರಿಸಿ ಲಿಂಗಣಾಪುರ ಸರ್ಕಲ್ ನಲ್ಲಿ ಬೈಕ್ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ 400 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.
ಕೂಡಲೇ ಆರೋಪಿಗಳು ಮತ್ತು ಬೈಕನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನ ಕ್ಕೆ ಕಳುಹಿಸಲಾಗಿದೆ.
ಪಿಎಸ್ಐ ವರ್ಷ ಅವರ ನೇತೃತ್ವದಲ್ಲಿ ಅಪರಾಧ ದಳದ ಸಿಬ್ಬಂದಿಗಳಾದ ಎಎಸ್ಐ ತಖೀವುಲ್ಲಾ, ರವಿ, ಕಿಶೋರ್, ವೆಂಕಟೇಶ್, ಬಿಳಿಗೌಡ,ಶಿವಕುಮಾರ್ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಅನಿಲ್, ರಾಜು, ಸಂಜಯ್ ಮತ್ತು ವೀರೇಂದ್ರ ದಾಳಿ ನಡೆಸಿದರು.