ಬೈಕ್ ನಿಂದ ಬಿದ್ದು ವ್ಯಕ್ತಿ ಸಾ*ವು:ಮತ್ತೊಬ್ಬ ಗಂಭೀರ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಆಯತಪ್ಪಿ ಬೈಕ್ ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ
ತಾಲೂಕಿನ ಸತ್ತೇಗಾಲ ಗ್ರಾಮದ ಬೈಪಾಸ್ ನಲ್ಲಿ ನಡೆದಿದೆ.

ಹನೂರು ತಾಲ್ಲೂಕು ಮಲೆ ಮಾದೇಶ್ವರ ಬೆಟ್ಟದ ಆನೆಹೊಲ ಗ್ರಾಮದ ನಿವಾಸಿ ಶಿವರಾಜು (30) ಮೃತಪಟ್ಟ ದುರ್ದೈವಿ. ಹಿಂಬದಿ ಸವಾರ ರವಿಚಂದ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಿಬ್ಬರು ನೆನ್ನೆ ರಾತ್ರಿ ಮಳವಳ್ಳಿ ಕಡೆಯಿಂದ ಸತ್ತೇಗಾಲ ಮಾರ್ಗವಾಗಿ ಸ್ವ ಗ್ರಾಮಕ್ಕೆ ತೆರಳುತ್ತಿದ್ದಾಗ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ನಲ್ಲಿ ರಸ್ತೆ ಹಂಪ್ಸ್ ನಲ್ಲಿ ಬೈಕ್ ಆಯತಪ್ಪಿ ಪೊಲೀಸ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಉರುಳಿದೆ.

ಶಿವರಾಜು ಸ್ಥಳದಲ್ಲಿ ಮೃತಪಟ್ಟಿದ್ದು, ರವಿಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ

ತಕ್ಷಣ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ,ಶಿವರಾಜು ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ರವಿಚಂದ್ರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಮೃತ ಶಿವರಾಜುವಿನ ಪತ್ನಿ ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.