ಮೈಸೂರು: ಮಳೆ,ಚಳಿ ಹಿನ್ನೆಲೆಯಲ್ಲಿ
ಎಚ್ ಡಿ ಕೋಟೆಯ ಕಾಡಿನಲ್ಲಿ ಹಾಡಿ ಜನಾಂಗದವರಿಗೆ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ನಿಂದ ಹೊದಿಕೆ ವಿತರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್ ಮಾತನಾಡಿ,ಇತ್ತೀಚಿಗೆ ಜಿಲ್ಲೆಯಲ್ಲಿ ವ್ಯಾಪಕವಾದ ಚಳಿ ಪ್ರಾರಂಭವಾಗಿದ್ದು ಮಳೆಯೂ ಸುರಿಯುತ್ತಿದೆ ಹಾಗಾಗಿ ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿದೆ ಹಾಗಾಗಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಶೀತ, ನೆಗಡಿ, ಜ್ವರ, ಅಜೀರ್ಣ, ಅಲರ್ಜಿಯಂತ ಸಮಸ್ಯೆಗಳು ಕಂಡುಬರುತ್ತದೆ. ಚಳಿಯ ತೀರ್ವತೆಯಿಂದ ರಕ್ತ ಸಂಚಾರದಲ್ಲಿ ತೊಂದರೆಯಾಗುವ ಸಾಧ್ಯತೆ ಇದ್ದು ಪಾಶ್ರ್ವವಾಯು, ಅಧಿಕ ಮಧುಮೇಹ, ಕಡಿಮೆ ರಕ್ತದೊತ್ತಡ, ಹೃದಯಘಾತಗಳಾಗುವ ಸಂಭವ ಹೆಚ್ಚಾಗಿರುತ್ತದೆ.ಹಾಗಾಗಿ ಆರೋಗ್ಯದ ಬಗೆಗೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು.
ಸ್ವಚ್ಚತೆ ಕಾಪಾಡಿಕೊಳ್ಳಿ, ಜಂಕ್‍ಪುಢಗಳ ಸೇವನೆ ಮಾಡಬೇಡಿ. ಯೋಗ, ಧ್ಯಾನ, ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆಗಳನ್ನು ಮಾಡಬೇಕು. ವಿಟಾಮಿನ್-ಡಿ ಹೊಂದಿರುವ ಸೂರ್ಯನ ಬೆಳೆಕು ಪಡೆಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿಹೇಳಿದರು.
ಮಧುಮೇಹ ಹೊಂದಿರುವವರು ತಪ್ಪದೇ ಔಷಧಿಗಳನ್ನು ತೆಗೆದುಕೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು, ನಿಯಮಿತವಾಗಿ ನೀರು ಕುಡಿಯಿರಿ. ಚಳಿಯಲ್ಲಿ ಸುತ್ತಾಟ ಮಾಡುವುದು ಬೇಡ ಎಂದು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್ ,
ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ , ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಕ್ರಪಾಣಿ, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಮೋಹನ್ ಕುಮಾರ್ ಗೌಡ ಮತ್ತಿತರರು ಹಾಜರಿದ್ದರು.