ಮೈಸೂರು: ಬೀದಿಬದಿ ಜೀವನ ಸಾಗಿಸುವ ನಿರ್ಗತಿಕರು ಹಾಗೂ ಬಡಜನರಿಗೆ ಚಳಿ ಹಾಗೂ ತಂಡಿಗಾಳಿಯಿಂದಾಗಿ ಆರೋಗ್ಯ ಸಮಸ್ಯೆ ಬರದಂತೆ ಮೈಸೂರಿನ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ನವರು ಕಂಬಳಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ರಾತ್ರಿ ರೈಲ್ವೆ ನಿಲ್ದಾಣದ ಮುಂಭಾಗ ರಸ್ತೆ ಬದಿ ಮಲಗಿರುವ ಬಡವರ್ಗದವರಿಗೆ ಹೊದಿಕೆ ನೀಡುವ ಮೂಲಕ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ ಲಿಂಗರಾಜು ಅವರು ಹೊದಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು,
ಬಡವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸಲ್ಲುತ್ತದೆ, ಇಂತಹ ಸೇವೆ ಮೂಲಕ ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಿ ಬದುಕನ್ನು ಹಸನಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ಕೆ ಎಮ್ ಪಿ ಕೆ ಚಾರಿಟೆಬಲ್ ಟ್ರಸ್ಟ್ ನ ಸೇವಾ ಕಾರ್ಯವನ್ನು ಲಿಂಗರಾಜು ಶ್ಲಾಘಿಸಿದರು.
ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,ಸ್ನೇಹಿತರ ಸಹಕಾರದೊಂದಿಗೆ ಕಳೆದ 6 ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ
ನಗರದ ವಿವಿಧ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ಯನ್ನು ವಿತರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಜೊತೆಗೆ ಕೆಲವೊಂದು ಹಾಡಿಗಳಿಗೂ ಭೇಟಿ ಕೊಟ್ಟಿ ಹಾಡಿ ಜನಾಂಗದವರಿಗೂ
ಹೂದಿಕೆ ಯನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಭಿಯಾನದಲ್ಲಿ ಬಿಜೆಪಿ ಮುಖಂಡ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಬಿ ರಾಮು,ಎಸ್ ಎನ್ ರಾಜೇಶ್, ಕಡಕೋಳ ಆರೋಗ್ಯ ಅಧಿಕಾರಿ ಮಂಜುನಾಥ್, ಸಚಿನ್ ನಾಯಕ್, ಅಮಿತ್ ಮತ್ತಿತರರು ಪಾಲ್ಗೊಂಡಿದ್ದರು.
