ಬೆಂಗಳೂರು: ಕಲಾಭೂಮಿ ಪ್ರತಿಷ್ಠಾನದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ಆಚರಿಸಿ ವಿವಿಧ ಕ್ಷೇತ್ರಗಳ 69 ಸಾಧಕರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆದ ಸಾ.ರಾ ಗೋವಿಂದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಸುಂದರ್ ರಾಜ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿ.ಎನ್ ಜಗದೀಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಪಿ. ಮೂರ್ತಿ, ಕನ್ನಡವೇ ಸತ್ಯ ರಂಗಣ್ಣ, ನಿರ್ಮಾಪಕರಾದ ಕಿರಣ್ ತೋಟಂಬೈಲು, ಚೇತನ್ ರಾಜ್, ಹಿರಿಯ ನಟರಾದ ಶಂಕರ್ ಭಟ್, ಪ್ರಣಯ ಮೂರ್ತಿ, ಹಿರಿಯ ಸಾಹಿತಿಗಳಾದ ಬೆ.ಗೋ ರಮೇಶ್, ಕಲಾಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಆಸ್ಕರ್ ಕೃಷ್ಣ, ಸಂಚಾಲಕರಾದ ನಿಂಗರಾಜ್ ಮತ್ತು ರಕ್ತದಾನಿ ಮಂಜು, ಚಾನೆಲ್ ಗ್ರೀನ್ ಸಂಸ್ಥಾಪಕರಾದ ಬಸವರಾಜ್
ಉಪಸ್ಥಿತರಿದ್ದರು.


ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ 69 ಸಾಧಕರಿಗೆ, ಸಮಾಜ ಸೇವಕರಿಗೆ ಹಾಗೂ ಪ್ರತಿಭಾನ್ವಿತರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಮೈಸೂರು ಜಿಲ್ಲೆಯಿಂದ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
